ಉಗ್ರನ ಬಿಡುಗಡೆಗೆ ಕೇಜ್ರೀವಾಲ್ಗೆ 134 ಕೋಟಿ ರೂ. ಪಾವತಿ: ಖಾಲಿಸ್ತಾನ್ ಪ್ರತ್ಯೇಕತಾವಾದಿ ಪನ್ನೂನ್ ಆರೋಪ
ಗುರುಪತ್ವಂತ್ ಸಿಂಗ್ ಪನ್ನೂನ್ | Photo: PTI
ನ್ಯೂಯಾರ್ಕ್: ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ಆಮ್ ಆದ್ಮಿ ಪಕ್ಷದ ಸಂಚಾಲಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಬಂಧಿತ ಭಯೋತ್ಪಾದಕನ ಬಿಡುಗಡೆಗೆ ಕೇಜ್ರೀವಾಲ್ಗೆ 134 ಕೋಟಿ ರೂಪಾಯಿ ನೀಡಿರುವುದಾಗಿ ಖಾಲಿಸ್ತಾನ್ ಪ್ರತ್ಯೇಕತಾವಾದಿ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಆರೋಪ ಮಾಡಿದ್ದಾನೆ.
2014ರಿಂದ 2022ರವರೆಗೆ ಹಂತಹಂತವಾಗಿ ಖಾಲಿಸ್ತಾನ್ ಗುಂಪುಗಳು ಕೇಜ್ರೀವಾಲ್ಗೆ ಒಟ್ಟು 134 ಕೋಟಿ ರೂಪಾಯಿ ಪಾವತಿಸಿವೆ. 2014ರಲ್ಲಿ ನ್ಯೂಯಾರ್ಕ್ನ ರಿಚ್ಮಂಡ್ ಹಿಲ್ನ ಗುರುದ್ವಾರದಲ್ಲಿ ಕೇಜ್ರೀವಾಲ್ ಖಾಲಿಸ್ತಾನ್ ಮುಖಂಡರನ್ನು ಭೇಟಿಯಾಗಿದ್ದು ಈ ಸಂದರ್ಭ ದಿಲ್ಲಿ ಬಾಂಬ್ ಸ್ಫೋಟದ ರೂವಾರಿ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಬಿಡುಗಡೆಗೆ ನೆರವಾಗುವುದಾಗಿ ಭರವಸೆ ನೀಡಿದ್ದರು. ಆದರೆ ಹಣ ಪಡೆದ ಬಳಿಕ ಭರವಸೆ ಮರೆತಿದ್ದಾರೆ ಎಂದು ಪನ್ನೂನ್ ಹೇಳಿದ್ದಾನೆ.
Next Story