ಲಾಹೋರ್ | ಶಾದ್ಮನ್ ಚೌಕವನ್ನು ಭಗತ್ ಸಿಂಗ್ ಚೌಕವೆಂದು ಮರುನಾಮಕರಣ ಮಾಡುವ ಯೋಜನೆ ರದ್ದು
ಭಗತ್ ಸಿಂಗ್ | PC : PTI
ಇಸ್ಲಾಮಾಬಾದ್ : ಲಾಹೋರ್ ನಗರದಲ್ಲಿರುವ ಶಾದ್ಮನ್ ಚೌಕವನ್ನು ಭಗತ್ ಸಿಂಗ್ ಚೌಕವೆಂದು ಮರುನಾಮಕರಣ ಮಾಡಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತದ ಸರಕಾರ ರದ್ದುಗೊಳಿಸಿರುವುದಾಗಿ ವರದಿಯಾಗಿದೆ.
ಯೋಜನೆಯ ಬಗ್ಗೆ ಪರಿಶೀಲನೆ ನಡೆಸಲು ನೇಮಿಸಲಾಗಿದ್ದ ನಿವೃತ್ತ ಮಿಲಿಟರಿ ಅಧಿಕಾರಿ ತಾರೀಖ್ ಮಜೀದ್ ನೀಡಿದ ಶಿಫಾರಸಿನ ಮೇರೆಗೆ ಯೋಜನೆಯನ್ನು ರದ್ದುಗೊಳಿಸಿರುವುದಾಗಿ ಪಂಜಾಬ್ ಸರಕಾರ ಲಾಹೋರ್ ಹೈಕೋರ್ಟ್ಗೆ ಲಿಖಿತ ಮಾಹಿತಿ ನೀಡಿದೆ
ಮುಸ್ಲಿಮರಿಗೆ ಪ್ರತಿಕೂಲವಾದ ಧಾರ್ಮಿಕ ಮುಖಂಡರಿಂದ ಭಗತ್ ಸಿಂಗ್ ಪ್ರಭಾವಿತನಾಗಿದ್ದ. ಭಗತ್ ಸಿಂಗ್ ಪ್ರತಿಷ್ಠಾನವು ಇಸ್ಲಾಮಿಕ್ ಸಿದ್ಧಾಂತ ಮತ್ತು ಪಾಕಿಸ್ತಾನದ ಸಂಸ್ಕೃತಿಯ ವಿರುದ್ಧ ಕೆಲಸ ಮಾಡುತ್ತಿರುವುದರಿಂದ ಅದನ್ನು ನಿಷೇಧಿಸಬೇಕು ಎಂದು ವರದಿಯಲ್ಲಿ ಆಗ್ರಹಿಸಲಾಗಿದೆ.
ಭಗತ್ ಸಿಂಗ್ ಬಗ್ಗೆ ನಿವೃತ್ತ ಕಮಾಂಡರ್ ಮಜೀದ್ ಅವರ ನಿಲುವನ್ನು ವಿರೋಧಿಸುತ್ತೇನೆ ಮತ್ತು ಭಗತ್ ಸಿಂಗ್ ಪ್ರತಿಷ್ಠಾನದ ವಿರುದ್ಧ ಗಂಭೀರ ಆರೋಪ ಮಾಡಿದ್ದಕ್ಕಾಗಿ ಕಾನೂನು ನೋಟಿಸ್ ಕಳುಹಿಸುತ್ತೇನೆ ಎಂದು ಭಗತ್ ಸಿಂಗ್ ಸ್ಮಾರಕ ಪ್ರತಿಷ್ಠಾನ(ಪಾಕಿಸ್ತಾನ)ದ ಅಧ್ಯಕ್ಷ ಇಮ್ತಿಯಾಝ್ ರಶೀದ್ ಖುರೇಷಿ ಹೇಳಿದ್ದಾರೆ.