ಲೆಬನಾನ್ | ಇಸ್ರೇಲ್ ನಿಂದ ಕದನ ವಿರಾಮ ಉಲ್ಲಂಘನೆ ; ವೈಮಾನಿಕ ದಾಳಿಯಲ್ಲಿ ಇಬ್ಬರು ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ಬೈರೂತ್ : ದಕ್ಷಿಣ ಲೆಬನಾನ್ನಲ್ಲಿ ಕದನ ವಿರಾಮದ ನಡುವೆಯೇ ಇಸ್ರೇಲ್ ಪಡೆ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿರುವುದಾಗಿ ಲೆಬನಾನ್ ಸೇನೆ ಹೇಳಿದೆ.
ದಕ್ಷಿಣ ಲೆಬನಾನ್ನ ಮರ್ಜಯೋನ್ ಪಟ್ಟಣದಲ್ಲಿ ಇಸ್ರೇಲ್ನ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇಸ್ರೇಲ್ ಗಡಿಭಾಗದಿಂದ 12 ಕಿ.ಮೀ ದೂರದಲ್ಲಿರುವ ನಬಾತಿಯೆಹ್ನಲ್ಲಿ ಇಸ್ರೇಲ್ನ ಡ್ರೋನ್ ದಾಳಿಯಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಮೃತಪಟ್ಟಿದ್ದು ಇದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಲೆಬನಾನ್ನ ಭದ್ರತಾ ಪಡೆ ಹೇಳಿದೆ.
Next Story