ಮಾಲ್ಡೀವ್ಸ್ : ಸೇನೆ ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಸೂಚನೆ
Photo : NDTV
ಮಾಲೆ : ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ದೇಶದಿಂದ ಭಾರತೀಯ ಸೇನೆ ಹಿಂದೆಗೆದುಕೊಳ್ಳುವಂತೆ, ಅಲ್ಲಿನ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ಸೂಚಿಸಿದೆ.
ಹೊಸದಾಗಿ ಆಯ್ಕೆಯಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯಿಂದ ಶನಿವಾರ ಈ ಘೋಷಣೆ ಮಾಡಲಾಗಿದೆ. ರಾಷ್ಟ್ರಪತಿಗಳ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದಾಗ ಅಧ್ಯಕ್ಷ ಮುಯಿಝು ಅವರು ಔಪಚಾರಿಕವಾಗಿ ಈ ಬಗ್ಗೆ ವಿನಂತಿಸಿದರು ಎಂದು ಪ್ರಕಟಣೆ ತಿಳಿಸಿದೆ. ಭೂ ವಿಜ್ಞಾನ ಸಚಿವರಾಗಿರುವ ರಿಜಿಜು ಅವರು ಮಾಲ್ಡೀವ್ಸ್ ಅಧ್ಯಕ್ಷರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು ಎಂದು ndtv ವರದಿ ಮಾಡಿದೆ.
Next Story