ಮಣಿಪುರ ಹಿಂಸಾಚಾರ: ಇಂಟರ್ನೆಟ್ ಮೇಲೆ ನಿಷೇಧ ಜೂ.30ರವರೆಗೆ ವಿಸ್ತರಣೆ
ಇಂಫಾಲ: ಮಣಿಪುರ ಸರಕಾರವು ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗುವುದನ್ನು ತಡೆಯಲು ರವಿವಾರ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಜೂನ್ 30ರವರೆಗೆ ವಿಸ್ತರಿಸಿದೆ. ಇದು ರಾಜ್ಯದಲ್ಲಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧದ ಸತತ ಮೂರನೇ ವಿಸ್ತರಣೆಯಾಗಿದೆ.
ರಾಜ್ಯದಲ್ಲಿ ಈಗಲೂ ಹಿಂಸಾಚಾರ,ದಾಳಿಗಳು ಮತ್ತು ಮನೆಗಳಿಗೆ ಬೆಂಕಿ ಹಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ, ಜನರನ್ನು ಪ್ರಚೋದಿಸಲು ಚಿತ್ರಗಳು,ದ್ವೇಷಭಾಷಣಗಳು ಮತ್ತು ದ್ವೇಷ ವೀಡಿಯೊ ಸಂದೇಶಗಳ ಪ್ರಸಾರಕ್ಕಾಗಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಕವಾಗಿ ಬಳಸಬಹುದಾದ ಆತಂಕವಿದೆ. ಹೀಗಾಗಿ ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮುಂದುವರಿಸಲಾಗಿದೆ ಎಂದು ರಾಜ್ಯದ ಡಿಜಿಪಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story