ಉಕ್ರೇನ್ ನ ಖಾರ್ಕಿವ್ ಮೇಲೆ ರಶ್ಯದ ಬೃಹತ್ ಕ್ಷಿಪಣಿ ದಾಳಿ
ಸಾಂದರ್ಭಿಕ ಚಿತ್ರ (Credit: @visegrad24)
ಕೀವ್: ಉಕ್ರೇನ್ ನ ಈಶಾನ್ಯ ನಗರವಾದ ಖಾರ್ಕಿವ್ ಮೇಲೆ ಬುಧವಾರ ಬೆಳಿಗ್ಗೆ ರಶ್ಯವು ಬೃಹತ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಖಾರ್ಕಿವ್ ಮೇಯರ್ ಇಗೋರ್ ಟೆರೆಖೋವ್ ಹೇಳಿದ್ದಾರೆ.
`ಖಾರ್ಕಿವ್ ಮೇಲೆ ಭಾರೀ ಕ್ಷಿಪಣಿ ದಾಳಿ ನಡೆದಿದೆ. ನಗರದಲ್ಲಿ ಸರಣಿ ಸ್ಫೋಟದ ಸದ್ದು ಕೇಳಿಬಂದಿದ್ದು ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರದತ್ತ ಧಾವಿಸಿವೆ. 7 ಕಡೆ ಕ್ಷಿಪಣಿ ದಾಳಿ ನಡೆದಿರುವ ಮಾಹಿತಿಯಿದ್ದು ಸಾವು-ನೋವಿನ ಪ್ರಮಾಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಟೆರೆಖೋವ್ ಹೇಳಿದ್ದಾರೆ. ಕಪ್ಪು ಸಮುದ್ರದಿಂದ ಉಕ್ರೇನ್ ಪ್ರದೇಶದತ್ತ ಕಲಿಬ್ರ್ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ ಎಂದು ಉಕ್ರೇನ್ ನ ವಾಯುಪಡೆ ಹೇಳಿದೆ. ಈ ಮಧ್ಯೆ, ಮಂಗಳವಾರ ತಡರಾತ್ರಿ ರಶ್ಯದ ಗಡಿದಾಟಿ ಬಂದ 59 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಬುಧವಾರ ಹೇಳಿದೆ.
Next Story