ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಮೋದಿ, ಟ್ರೂಡೊ ಸಂಕ್ಷಿಪ್ತ ಸಂವಾದ
Photo: PTI
ಟೊರಂಟೊ : ಇಟಲಿಯ ಅಪುಲಿಯಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಜತೆ ಸಂಕ್ಷಿಪ್ತ ಸಂವಾದ ನಡೆಸಿದರು ಎಂದು ವರದಿಯಾಗಿದೆ.
ಖಾಲಿಸ್ತಾನ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಏಜೆಂಟರ ಸಂಪರ್ಕದ ಬಗ್ಗೆ ವಿಶ್ವಾಸಾರ್ಹ ಮಾಹಿತಿಯಿದೆ ಎಂದು ಕಳೆದ ವರ್ಷದ ಸೆಪ್ಟೆಂಬರ್ 18ರಂದು ಟ್ರೂಡೊ ಕೆನಡಾ ಸಂಸತ್ತಿನಲ್ಲಿ ಆರೋಪಿಸಿದ ಬಳಿಕ ಉಭಯ ಮುಖಂಡರ ಪ್ರಥಮ ಭೇಟಿ ಇಡಾಗಿದೆ.
ಈ ಭೇಟಿ ಅಧಿಕೃತ ವೇಳಾಪಟ್ಟಿಯಲ್ಲಿ ಇರಲಿಲ್ಲ. ಇಬ್ಬರು ಮುಖಂಡರು(ಇಬ್ಬರ ಮುಖದಲ್ಲೂ ನಗು ಇಲ್ಲದ) ಒಟ್ಟಿಗೆ ಇರುವ ಫೋಟೋವನ್ನು ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಮರು ಆಯ್ಕೆಗೊಂಡಿರುವುದಕ್ಕೆ ಪ್ರಧಾನಿ ಟ್ರೂಡೊ ಅಭಿನಂದಿಸಿದ್ದಾರೆ' ಎಂದು ಕೆನಡಾ ಪ್ರಧಾನಿಯ ಕಾರ್ಯಾಲಯದ ವಕ್ತಾರರು ಹೇಳಿದ್ದಾರೆ.
Next Story