ಮಾಸ್ಕೊ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಪ್ರಕರಣ: ಮೃತರ ಸಂಖ್ಯೆ 60ಕ್ಕೆ ಏರಿಕೆ
ದಾಳಿಯ ಹೊಣೆ ಹೊತ್ತ ಐಸಿಸ್
Photo: screenshot/ twitter.com/RT_India_news
ಹೊಸದಿಲ್ಲಿ: ರಷ್ಯಾದ ರಾಜಧಾನಿಯ ಕ್ರಾಕಸ್ ಸಿಟಿ ಹಾಲ್ನಲ್ಲಿ ಸಂಗೀತ ಕಾರ್ಯಕ್ರಮದ ಮೇಲೆ ಭಯೋತ್ಪಾದಕರು ಶುಕ್ರವಾರ ನಡೆಸಿದ ದಾಳಿಯ ಹೊಣೆಯನ್ನು ಐಸಿಸ್ ಹೊತ್ತಿದೆ. ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿದ್ದು, 145ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಸಂಬಂಧ ಟೆಲಿಗ್ರಾಂ ಮೆಸೇಜಿಂಗ್ ಆ್ಯಪ್ ನಲ್ಲಿ ಹೇಳಿಕೆ ನೀಡಿರುವ ಇಸ್ಲಾಮಿಕ್ ಸ್ಟೇಟ್, "ರಷ್ಯಾದ ರಾಜಧಾನಿ ಮಾಸ್ಕೊದ ಹೊರವಲಯದಲ್ಲಿ ದೊಡ್ಡ ಗುಂಪಿನ ಮೇಲೆ ದಾಳಿ ಮಾಡಿದ್ದೇವೆ" ಎಂದು ಹೇಳಿಕೊಂಡಿದೆ ಎಂದು ಎಎಫ್ಪಿ ವರದಿ ಮಾಡಿದೆ.
ರಷ್ಯಾದ ಮೂಲಗಳ ಪ್ರಕಾರ, ಬಂದೂಕುಧಾರಿಗಳು ಸ್ಫೋಟಕಗಳನ್ನು ಎಸೆದು 6000 ಮಂದಿಗೆ ಆಸನ ವ್ಯವಸ್ಥೆ ಇರುವ ಹಾಲ್ ನಲ್ಲಿ ಬೆಂಕಿ ಹಚ್ಚಿದರು.
ಇಡೀ ಕಟ್ಟಡ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿರುವ ಮತ್ತು ಆಗಸದೆತ್ತರಕ್ಕೆ ದಟ್ಟ ಹೊಗೆ ವ್ಯಾಪಿಸಿರುವ ಚಿತ್ರಣವನ್ನು ಬಿಂಬಿಸುವ ವಿಡಿಯೊ ತುಣುಕುಗಳು ಹರಿದಾಡುತ್ತಿವೆ.
ಸುಮಾರು 100 ಮಂದಿಯನ್ನು ಈ ಸಭಾಗೃಹದಿಂದ ರಕ್ಷಿಸಲಾಗಿದೆ ಮತ್ತು ಇನ್ನಷ್ಟು ಮಂದಿಗೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ತುರ್ತುಸೇವಾ ವಿಭಾಗ ಹೇಳಿದೆ. ಘಟನೆ ಬಗ್ಗೆ ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯಲಾಗುತ್ತಿದೆ ಎಂದು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ದಾಳಿಯನ್ನು ವಿಶ್ವಾದ್ಯಂತ ವ್ಯಾಪಕವಾಗಿ ಖಂಡಿಸಲಾಗಿದೆ. ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಈ ಬಗ್ಗೆ ಹೇಳಿಕೆ ನೀಡಿ, ಚಿತ್ರಗಳು ಭಯಾನಕವಾಗಿದ್ದು, ನೋಡುವುದು ಕೂಡಾ ಕಷ್ಟ. ಈ ಭಯಾನಕ ದಾಳಿಯಿಂದ ಸಂತ್ರಸ್ತರಾದವರ ಜತೆ ನಾವಿದ್ದೇವೆ ಎಂದು ಸ್ಪಷ್ಟಪಡಿಸಿ