ಉಗಾಂಡಾ ಜೈಲಿನಲ್ಲಿ ಎಂಫಾಕ್ಸ್ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
ಕಂಪಾಲ : ಮಧ್ಯ ಉಗಾಂಡಾದ ನಕಸೋಂಗೋಲಾ ಜೈಲಿನಲ್ಲಿ ಎಂಫಾಕ್ಸ್ ಪ್ರಕರಣ ಪತ್ತೆಯಾಗಿದೆ. ರೋಗಿಯನ್ನು ಪ್ರತ್ಯೇಕವಾಗಿರಿಸಿದ್ದು ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಕೈದಿ ಕೊಲೆ ಅಪರಾಧಕ್ಕೆ ಜೈಲಿನಲ್ಲಿ ಇರುವುದರಿಂದ ದುರದೃಷ್ಟವಶಾತ್ ಆತನನ್ನು ಜಾಮೀನು ಮೇಲೆ ಬಿಡುಗಡೆಗೊಳಿಸಲಾಗದು. ಆತ ಜೈಲಿಗೆ ಬರುವಾಗಲೇ ಸೋಂಕಿಗೆ ತುತ್ತಾಗಿರುವ ಶಂಕೆಯಿದೆ ಎಂದು ಉಗಾಂಡಾ ಬಂಧೀಖಾನೆ ಇಲಾಖೆಯ ವಕ್ತಾರ ಫ್ರ್ಯಾಂಕ್ ಬೈನ್ ಹೇಳಿದ್ದಾರೆ. ಇದರೊಂದಿಗೆ ಉಗಾಂಡಾದಲ್ಲಿ ಎಂಫಾಕ್ಸ್ ಪ್ರಕರಣಗಳ ಸಂಖ್ಯೆ 41ಕ್ಕೇರಿದಂತಾಗಿದೆ.
ವರ್ಷದ ಆರಂಭದಲ್ಲಿ ನೆರೆಯ ಕಾಂಗೋ ಗಣರಾಜ್ಯದಲ್ಲಿ ಮೊದಲು ಪತ್ತೆಯಾದ ಎಂಫಾಕ್ಸ್ನ ಹೊಸ ರೂಪಾಂತರವನ್ನು ಆಗಸ್ಟ್ನಲ್ಲಿ ಗುರುತಿಸಿದ ಬಳಿಕ ಎಂಫಾಕ್ಸ್ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
Next Story