ಮ್ಯಾನ್ಮಾರ್ ಭೂಕಂಪ: ನೆರವು ಪೂರೈಕೆಗೆ ಸಹಾಯ ಮಾಡಲು ಕದನ ವಿರಾಮ ಘೋಷಿಸಿದ ಸೇನಾಡಳಿತ
Photo | X
ಯಾಂಗಾನ್: ಮ್ಯಾನ್ಮಾರ್ ನಲ್ಲಿ ಸುಮಾರು ಒಂದು ವಾರದ ಹಿಂದೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3 ಸಾವಿರದ ಗಡಿ ದಾಟಿದ್ದು ಜಾಗತಿಕ ಸಮುದಾಯ ನೆರವಿನ ಹಸ್ತ ಚಾಚಿದೆ. ನೆರವು ಪೂರೈಕೆಗೆ ಇರುವ ಅಡೆತಡೆಯನ್ನು ತೊಡೆದುಹಾಕಲು ತಾತ್ಕಾಲಿಕ ಕದನ ವಿರಾಮ ಜಾರಿಗೊಳಿಸುವುದಾಗಿ ಮ್ಯಾನ್ಮಾರ್ ಸೇನಾಡಳಿತ ಗುರುವಾರ ಘೋಷಿಸಿದೆ.
ಸೇನಾಡಳಿತವನ್ನು ವಿರೋಧಿಸುತ್ತಿರುವ ಸಶಸ್ತ್ರ ಹೋರಾಟಗಾರರ ಗುಂಪು ಭೂಕಂಪದಿಂದ ಮನೆಮಠ ಕಳೆದುಕೊಂಡವರಿಗೆ ನೆರವು ಪೂರೈಕೆಯನ್ನು ಸರಾಗಗೊಳಿಸಲು ಈಗಾಗಲೇ ಏಕಪಕ್ಷೀಯ ಕದನ ವಿರಾಮ ಘೋಷಿಸಿದೆ. ಇದಕ್ಕೆ ಸ್ಪಂದಿಸಿರುವ ಸೇನಾಡಳಿತವೂ ತಾತ್ಕಾಲಿಕ ಕದನ ವಿರಾಮ ಘೋಷಿಸಿದ್ದು ಇದು ಎಪ್ರಿಲ್ 22ರವರೆಗೆ ಜಾರಿಯಲ್ಲಿರುತ್ತದೆ ಎಂದಿದೆ. ಈ ಸಂದರ್ಭದಲ್ಲಿ ಬಂಡುಕೋರರ ಗುಂಪು ಮರು ಸಂಘಟಿತಗೊಳ್ಳಲು ಹಾಗೂ ದಾಳಿ ನಡೆಸಲು ತರಬೇತಿ ಆಯೋಜಿಸುವುದು ಗಮನಕ್ಕೆ ಬಂದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸೇನಾಡಳಿತ ಎಚ್ಚರಿಕೆ ರವಾನಿಸಿದೆ.
Next Story