ʼರಾಜಪ್ರಭುತ್ವ ಬೆಂಬಲಿಸುವ' ಭಾರತೀಯ ಮಾಧ್ಯಮ ನಿಷೇಧಿಸಲು ನೇಪಾಳಿ ಕಾಂಗ್ರೆಸ್ ಒತ್ತಾಯ

ಸಾಂದರ್ಭಿಕ ಚಿತ್ರ | PC : PTI
ಕಠ್ಮಂಡು: ರಾಜಪ್ರಭುತ್ವ ಪರ ಪ್ರತಿಪಾದಿಸುವ, ದೇಶ ಮತ್ತು ಅದರ ಜನರ ಭಾವನೆಗಳು ಮತ್ತು ಹಿತಾಸಕ್ತಿಗಳಿಗೆ ವಿರುದ್ಧವಾದ ಸುದ್ದಿಗಳನ್ನು ಪ್ರಸಾರ ಮಾಡುವ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಭಾರತೀಯ ಮಾಧ್ಯಮಗಳನ್ನು ನೇಪಾಳದಲ್ಲಿ ನಿಷೇಧಿಸುವಂತೆ ನೇಪಾಳಿ ಕಾಂಗ್ರೆಸ್ ಆಗ್ರಹಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್-ನ್ಯೂಸ್ 18 ವರದಿ ಮಾಡಿದೆ.
ನೇಪಾಳಿ ಕಾಂಗ್ರೆಸ್ನ ಮಾಧೆಸ್ ಪ್ರಾಂತ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ ಕುಮಾರ ಪ್ರಸಾದ್ ಯಾದವ್ ನೇತೃತ್ವದ ತಂಡವು ಪಾರ್ಸ ಮತ್ತು ಬಾರ ಪ್ರಾಂತದ ಮುಖ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿ ನೇಪಾಳದಲ್ಲಿ ರಾಜಪ್ರಭುತ್ವವನ್ನು ಬೆಂಬಲಿಸುವ ಭಾರತೀಯ ಮಾಧ್ಯಮಗಳ ನಿಷೇಧಕ್ಕೆ ಒತ್ತಾಯಿಸಿದರು. ರಾಜಪ್ರಭುತ್ವ ಮರುಸ್ಥಾಪನೆಗೆ ಆಗ್ರಹಿಸಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದ ಹಿಂಸಾಚಾರ ಹಾಗೂ ಸಾವು-ನೋವಿಗೆ ಮಾಜಿ ದೊರೆ ಗ್ಯಾನೇಂದ್ರರನ್ನು ಹೊಣೆಯಾಗಿಸಬೇಕು ಎಂದು ಸಂಸತ್ನಲ್ಲಿ ಅತೀ ದೊಡ್ಡ ಪಕ್ಷವಾದ ನೇಪಾಳಿ ಕಾಂಗ್ರೆಸ್ ಆಗ್ರಹಿಸಿದೆ.
Next Story