ಲೆಬನಾನ್ ನಲ್ಲಿನ ಪೇಜರ್ ದಾಳಿಗೆ ಅನುಮತಿ ನಾನು ನೀಡಿದ್ದೆ: ದೃಢಪಡಿಸಿದ ನೆತನ್ಯಾಹು
ಟೆಲ್ ಅವೀವ್: ಲೆಬನಾನ್ ನಲ್ಲಿ ನಡೆದಿದ್ದ ಪೇಜರ್ ದಾಳಿಗೆ ನಾನು ಅನುಮತಿ ನೀಡಿದ್ದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ. ಸೆಪ್ಟೆಂಬರ್ ನಲ್ಲಿ ನಡೆದಿದ್ದ ಈ ದಾಳಿಯಲ್ಲಿ ಸುಮಾರು 40 ಮಂದಿ ಮೃತಪಟ್ಟು, 3,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಲೆಬನಾನ್ ನಲ್ಲಿ ನಡೆದಿದ್ದ ಪೇಜರ್ ಕಾರ್ಯಾಚರಣೆಗೆ ನಾನು ಹಸಿರು ನಿಶಾನೆ ತೋರಿದ್ದೆ ಎಂದು ರವಿವಾರ ನೆತನ್ಯಾಹು ದೃಢಪಡಿಸಿದ್ದಾರೆ ಎಂದು ಅವರ ವಕ್ತಾರ ಒಮರ್ ದೋಸ್ತ್ರಿ AFP ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ 17 ಹಾಗೂ 18ರಂದು ಹಿಜ್ಬುಲ್ಲಾಗಳ ಹಿಡಿತ ಹೊಂದಿರುವ ಪ್ರದೇಶಗಳಲ್ಲಿ ಹಲವಾರು ಪೇಜರ್ ಗಳು ಸ್ಫೋಟಗೊಂಡಿದ್ದವು. ಈ ಸ್ಪೋಟಕ್ಕೆ ಇಸ್ರೇಲ್ ಕಾರಣ ಎಂದು ಇರಾನ್ ಮತ್ತು ಲೆಬನಾನ್ ಆರೋಪಿಸಿದ್ದವು.
Next Story