ಚೀನಾದ ಪುನರೇಕೀಕರಣ ನಿಶ್ಚಿತ: ಕ್ಸಿಜಿಂಪಿಂಗ್
ಕ್ಸಿಜಿಂಪಿಂಗ್ | Photo: PTI
ಬೀಜಿಂಗ್: ಸರಣಿ ಪ್ರಾಕೃತಿಕ ವಿಪತ್ತುಗಳ ಆಘಾತ ಎದುರಾದರೂ ದೇಶದ ಆರ್ಥಿಕತೆ ಈ ವರ್ಷ ಕ್ರಿಯಾತ್ಮಕವಾಗಿದೆ ಮತ್ತು ಹೆಚ್ಚಿನ ಚೇತರಿಕೆ ದಾಖಲಿಸಿದೆ ಎಂದು ಚೀನಾದ ಅಧ್ಯಕ್ಷ ಕ್ಸಿಜಿಂಪಿಂಗ್ ರವಿವಾರ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಹೊಸ ವರ್ಷದ ಸಂದೇಶ ನೀಡಿದ ಅವರು `ಚೀನಾದ ಪುನರೇಕೀರಣಕ್ಕೆ ಬದ್ಧ' ಎಂದು ಘೋಷಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಿರುವ ತೈವಾನ್ ತನ್ನ ಭೂಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಗತ್ಯಬಿದ್ದರೆ ಬಲಪ್ರಯೋಗ ನಡೆಸಿಯಾದರೂ ತೈವಾನ್ ಅನ್ನು ಸ್ವಾಧೀನಕ್ಕೆ ಪಡೆಯುವುದಾಗಿ ಹೇಳುತ್ತಿದೆ.
ತೈವಾನ್ ಜಲಸಂಧಿಯ ಎರಡೂ ಬದಿಯಲ್ಲಿರುವ ಎಲ್ಲಾ ಚೀನೀಯರೂ ಸಾಮಾನ್ಯ ಉದ್ದೇಶದ ಪ್ರಜ್ಞೆಯಿಂದ ಬದ್ಧರಾಗಿರಬೇಕು ಮತ್ತು ಚೀನೀ ರಾಷ್ಟ್ರದ ಪುನರುಜ್ಜೀವನದ ವೈಭವದಲ್ಲಿ ಪಾಲ್ಗೊಳ್ಳಬೇಕು ಎಂದು ಕ್ಸಿಜಿಂಪಿಂಗ್ ಹೇಳಿದ್ದಾರೆ.
Next Story