ನಿಜ್ಜಾರ್ ಹತ್ಯೆ ಪ್ರಕರಣ: ಸ್ಟಡಿ ಪರ್ಮಿಟ್ ಬಳಸಿ ಕೆನಡಾ ಪ್ರವೇಶಿಸಿದ್ದ ಆರೋಪಿ; ವರದಿ

ಒಟ್ಟಾವ : ಖಾಲಿಸ್ತಾನ್ ಮುಖಂಡ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆನಡಾ ಪೊಲೀಸರು ಬಂಧಿಸಿರುವ ಮೂವರು ಶಂಕಿತ ಆರೋಪಿಗಳಲ್ಲಿ ಒಬ್ಬ `ಸ್ಟಡಿ ಪರ್ಮಿಟ್' ಬಳಸಿ ಕೆನಡಾ ಪ್ರವೇಶಿಸಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಕೆನಡಾದ `ಗ್ಲೋಬಲ್ ನ್ಯೂಸ್' ಸುದ್ಧಿಸಂಸ್ಥೆ ವರದಿ ಮಾಡಿದೆ.
ಕೆನಡಾ ಪೊಲೀಸರು ಆರೋಪಿಗಳಾದ ಕರಣ್ ಬ್ರಾರ್, ಕಮಲ್‍ಪ್ರೀತ್ ಸಿಂಗ್ ಮತ್ತು ಕರಣ್‍ಪ್ರೀತ್ ಸಿಂಗ್‍ರನ್ನು ಬಂಧಿಸಿದ್ದರು. ಇವರಲ್ಲಿ ಕರಣ್ ಬ್ರಾರ್ ಪಂಜಾಬ್‍ನ ಬಟಿಂಡಾದ `ವಲಸೆ ಸೇವಾ ಕೇಂದ್ರ'ದಿಂದ ಸ್ಟಡಿ ಪರ್ಮಿಟ್ ಪಡೆದು 3 ವರ್ಷದ ಹಿಂದೆ ಕೆನಡಾಕ್ಕೆ ಆಗಮಿಸಿದ್ದ ಎಂದು ವರದಿಯಾಗಿದೆ.
Next Story