ಬ್ಲಿಂಕೆನ್ ಮಧ್ಯಪ್ರಾಚ್ಯ ಪ್ರವಾಸ ಮುಂದೂಡಿಕೆ
ಆಂಟನಿ ಬ್ಲಿಂಕೆನ್ | PC : NDTV
ವಾಷಿಂಗ್ಟನ್ : ಅನಿಶ್ಚಿತತೆಯ ನಡುವೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮಧ್ಯಪ್ರಾಚ್ಯ ಪ್ರವಾಸವನ್ನು ಮುಂದೂಡಿದ್ದು, ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದರೆ ಗುರುವಾರ ತೆರಳಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, 20 ಶತಕೋಟಿ ಡಾಲರ್ಗೂ ಹೆಚ್ಚು ಮೊತ್ತದ ಎಫ್-15 ಯುದ್ಧ ವಿಮಾನಗಳು ಹಾಗೂ ಇತರ ಮಿಲಿಟರಿ ಸಾಧನಗಳು, ಸುಮಾರು 774 ದಶಲಕ್ಷ ಡಾಲರ್ ಮೊತ್ತದ ಟ್ಯಾಂಕ್ ಸಿಡಿಮದ್ದುಗಳು, 583 ದಶಲಕ್ಷ ಡಾಲರ್ ಮೊತ್ತದ ಸೇನಾ ವಾಹನಗಳನ್ನು ಇಸ್ರೇಲ್ಗೆ ಒದಗಿಸುವ ಯೋಜನೆಯನ್ನು ಬ್ಲಿಂಕೆನ್ ಅನುಮೋದಿಸಿದ್ದಾರೆ ಎಂದು ವರದಿ ಹೇಳಿದೆ.
Next Story