ಇಸ್ರೇಲ್ | ರಕ್ಷಣಾ ಸಚಿವರನ್ನು ವಜಾಗೊಳಿಸಿದ ಪ್ರಧಾನಿ ಬೆಂಜಮಿನ್ ನೆತನ್ಯಾಹು
ಪ್ರಧಾನಿ ಬೆಂಜಮಿನ್ ನೆತನ್ಯಾಹು | PC : PTi
ಟೆಲ್ ಅವೀವ್ : ಇಸ್ರೇಲ್ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಂಗಳವಾರ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ.
ಅತ್ತ ಅಮೆರಿಕದಲ್ಲಿ ಚುನಾವಣೆಗೆ ನಡೆಯುತ್ತಿರುವಾಗಲೇ ಬೆಂಜಮಿನ್ ನೆತನ್ಯಾಹು ಅವರ ಈ ಘೋಷಣೆ ಹೊರಬಿದ್ದಿದೆ. ಎಂದು ಪ್ರಧಾನಿ ಕಚೇರಿಯ ಹೇಳಿಕೆಯೊಂದು ತಿಳಿಸಿದೆ. ಕಾಟ್ಜ್ ಅವರು ರಕ್ಷಣಾ ಖಾತೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ.
"ಇಸ್ರೇಲ್ ನ ಪ್ರಧಾನಿಯಾಗಿ ನನ್ನ ಅತ್ಯುನ್ನತ ಕರ್ತವ್ಯವೆಂದರೆ ಇಸ್ರೇಲ್ನ ಭದ್ರತೆಯನ್ನು ಕಾಪಾಡುವುದು ಮತ್ತು ನಿರ್ಣಾಯಕ ವಿಜಯದತ್ತ ನಮ್ಮನ್ನು ಕೊಂಡೊಯ್ಯುವುದು" ಎಂದು ನೆತನ್ಯಾಹು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಯುದ್ಧದ ಸಮಯದಲ್ಲಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರ ನಡುವೆ ಸಂಪೂರ್ಣ ನಂಬಿಕೆ ಅತ್ಯಗತ್ಯ. ನಾವು ಆರಂಭದಲ್ಲಿ ಈ ನಂಬಿಕೆಯನ್ನು ಹೊಂದಿದ್ದೆವು. ಆದರೆ ಈಗ ಆ ನಂಬಿಕೆ ಕುಸಿಯುತ್ತಿದೆ” ಎಂದು ಅವರು ಹೇಳಿದ್ದಾರೆ.
Next Story