ವಲಸೆ ನೀತಿಯಲ್ಲಿ ಬದಲಾವಣೆ ಇಲ್ಲ: ಬ್ರಿಟನ್ ಸ್ಪಷ್ಟನೆ
ಬ್ರಿಟನ್ ಪ್ರಧಾನಿ ರಿಷಿ ಸುನಕ್
ಲಂಡನ್: ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಸುರಕ್ಷತೆಗಾಗಿ ಬ್ರಿಟನ್ ತನ್ನ ವಲಸೆ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಯೋಜನೆಯನ್ನು ಬ್ರಿಟನ್ ಹೊಂದಿಲ್ಲ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ವಕ್ತಾರರು ಗುರುವಾರ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು ಈ ವರ್ಷ ಅಂತಿಮಗೊಳಿಸಬಹುದೆಂಬ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ಮಾತುಕತೆ ಪ್ರಗತಿಯಲ್ಲಿದೆ ಎಂದು ಪ್ರಧಾನಿ ರಿಷಿ ಸುನಕ್ ಕೂಡಾ ಹೇಳಿದ್ದರು. ಆದರೆ ಸಂಪೂರ್ಣ ಬ್ರಿಟನ್ಗೆ ಪ್ರಯೋಜನವಾಗುವ ವಿಧಾನಕ್ಕೆ ಮಾತ್ರ ತಾನು ಸಮ್ಮತಿಸುವುದಾಗಿ ಸುನಕ್ ಸ್ಪಷ್ಟಪಡಿಸಿದ್ದರು. `ಪ್ರಸ್ತುತ ವಲಸೆಯ ಮಟ್ಟಗಳು ತುಂಬಾ ಹೆಚ್ಚಿವೆ ಎಂಬುದು ಪ್ರಧಾನಿಯವರ ಅಭಿಮತವಾಗಿದೆ.
ಸ್ಪಷ್ಟವಾಗಿ ಹೇಳಬೇಕೆಂದರೆ ವಿದ್ಯಾರ್ಥಿ ವೀಸಾ ಸೇರಿದಂತೆ ಬ್ರಿಟನ್-ಭಾರತ ಮುಕ್ತ ವ್ಯಾಪಾರ ಒಪ್ಪಂದವನ್ನು ಸಾಧಿಸಲು ನಮ್ಮ ವಲಸೆ ನೀತಿಯನ್ನು ಬದಲಾಯಿಸುವ ಯಾವುದೇ ಯೋಜನೆಗಳಿಲ್ಲ' ಎಂದು ವಕ್ತಾರರು ಹೇಳಿದ್ದಾರೆ.
Next Story