ಯುದ್ಧ ಕೊನೆಗೊಳ್ಳದ ಹೊರತು ಒತ್ತೆಯಾಳು - ಕೈದಿ ವಿನಿಮಯ ಸಾಧ್ಯವಿಲ್ಲ : ಹಮಾಸ್
ಸಾಂದರ್ಭಿಕ ಚಿತ್ರ | PC : PTI
ಕೈರೊ : ಗಾಝಾದಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಳ್ಳದ ಹೊರತು ಇಸ್ರೇಲ್ ಜತೆ ಒತ್ತೆಯಾಳು-ಕೈದಿಗಳ ವಿನಿಮಯ ಒಪ್ಪಂದ ಸಾಧ್ಯವಿಲ್ಲ ಎಂದು ಹಮಾಸ್ನ ಗಾಝಾ ಮುಖ್ಯಸ್ಥ ಖಲೀಲ್ ಅಲ್-ಹಯಾ ಹೇಳಿರುವುದಾಗಿ ವರದಿಯಾಗಿದೆ.
ಆಕ್ರಮಣ ಕೊನೆಗೊಳ್ಳದಿದ್ದರೆ ಹಮಾಸ್ ಯಾಕೆ ಒತ್ತೆಯಾಳುಗಳನ್ನು ಹಿಂದಿರುಗಿಸಬೇಕು. ಯುದ್ಧವು ಮುಂದುವರಿಯುತ್ತಿರುವಾಗ ಓರ್ವ ವಿವೇಕಿ ಅಥವಾ ಅವಿವೇಕಿ ತಾನು ಹೊಂದಿರುವ ಬಲಿಷ್ಠ ಕಾರ್ಡನ್ನು (ಟ್ರಂಪ್ ಕಾರ್ಡ್) ಯಾಕೆ ಕಳೆದುಕೊಳ್ಳುತ್ತಾನೆ? ಹಲವು ದೇಶಗಳು ಮತ್ತು ಮಧ್ಯಸ್ಥಿಕೆದಾರರು ಮಾತುಕತೆ ಪುನರಾರಂಭಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ. ನಾವು ಕೂಡಾ ಈ ಪ್ರಯತ್ನ ಮುಂದುವರಿಸಲು ಸಿದ್ಧವಿದ್ದೇವೆ. ಆದರೆ ಆಕ್ರಮಣವನ್ನು ಕೊನೆಗೊಳಿಸಲು ಇಸ್ರೇಲ್ ನೈಜ ಬಯಕೆಯನ್ನು ಹೊಂದಿರುವ ಅಗತ್ಯವಿದೆ. ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೊಡ್ಡ ತಡೆಯಾಗಿರುವುದು ಈಗಾಗಲೇ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.
Next Story