ಬ್ರಿಕ್ಸ್ ಕರೆನ್ಸಿಯನ್ನು ಹೊಂದುವ ಯಾವುದೇ ಪ್ರಸ್ತಾಪಗಳಿಲ್ಲ: ವಿದೇಶಾಂಗ ಸಚಿವ ಜೈಶಂಕರ್
ಎಸ್.ಜೈಶಂಕರ್ | PC : PTI
ದೋಹ: ಬ್ರಿಕ್ಸ್ ದೇಶಗಳು ಅಮೆರಿಕದ ಡಾಲರ್ ಅನ್ನು ದುರ್ಬಲಗೊಳಿಸುವ ಉದ್ದೇಶವನ್ನು ಹೊಂದಿಲ್ಲ ಹಾಗೂ ಬ್ರಿಕ್ಸ್ ಕರೆನ್ಸಿಯನ್ನು ಹೊಂದುವ ಯಾವುದೇ ಪ್ರಸ್ತಾಪಗಳಿಲ್ಲ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಬ್ರಿಕ್ಸ್ ದೇಶಗಳು ತಮ್ಮದೇ ಆದ ಕರೆನ್ಸಿಯನ್ನು ಹೊಂದುವ ಪ್ರಯತ್ನ ನಡೆಸಿದರೆ ಬ್ರಿಕ್ಸ್ ದೇಶಗಳ ಮೇಲೆ 100%ದಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ವಾರದ ಬಳಿಕ ಜೈಶಂಕರ್ ಹೇಳಿಕೆ ಹೊರಬಿದ್ದಿದೆ.
ಈ ವಿಷಯದಲ್ಲಿ ಬ್ರಿಕ್ಸ್ ದೇಶಗಳು ಚರ್ಚೆ ನಡೆಸಿಲ್ಲ. ಇದಕ್ಕೆ ಪ್ರಚೋದನೆ ಏನು ಎಂಬುದೂ ಖಚಿತವಾಗಿ ತಿಳಿದಿಲ್ಲ. ಭಾರತ ಎಂದಿಗೂ ಡಾಲರ್ ದುರ್ಬಲಗೊಳಿಸುವ ಆಸಕ್ತಿಯನ್ನು ಹೊಂದಿಲ್ಲ. ಅಲ್ಲದೆ ಡಾಲರ್ಗೆ ಪೈಪೋಟಿ ನೀಡಲು ಹೊಸ ಕರೆನ್ಸಿ ಪರಿಚಯಿಸುವ ಪ್ರಸ್ತಾಪ ಬ್ರಿಕ್ಸ್ ಎದುರಿಗೆ ಇಲ್ಲ 'ಎಂದು ಜೈಶಂಕರ್ ಹೇಳಿದ್ದಾರೆ.
ಖತರ್ ರಾಜಧಾನಿ ದೋಹಾದಲ್ಲಿ ನಡೆಯುತ್ತಿರುವ ದೋಹಾ ವೇದಿಕೆ ಸಭೆಯಲ್ಲಿ ಜೈಶಂಕರ್ ಮಾತನಾಡಿದರು.
Next Story