ಯುದ್ಧಕ್ಕಿದು ಸಮಯವಲ್ಲ : ಮೋದಿ
ಆಸ್ಟ್ರಿಯಾಕ್ಕೆ ಪ್ರಧಾನಿ ಭೇಟಿ
ನರೇಂದ್ರ ಮೋದಿ | PC : PTI
ವಿಯೆನ್ನಾ : ತನ್ನ ರಶ್ಯ ಪ್ರವಾಸವನ್ನು ಸಮಾರೋಪಗೊಳಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಯುರೋಪ್ ರಾಷ್ಟ್ರವಾದ ಆಸ್ಟ್ರಿಯಾಕ್ಕೆ ಬುಧವಾರ ಆಗಮಿಸಿದ್ದಾರೆ. ಆಸ್ಟ್ರಿಯಾ ಚಾನ್ಸಲರ್ ಕಾರ್ಲ್ ನೆಹಾಮ್ಮರ್ ಜತೆ ಅವರು ಮಾತುಕತೆಗಳನ್ನು ನಡೆಸಿದ್ದಾರೆ. ಆನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೋದಿ ಅವರು, ‘ಯುದ್ಧಕ್ಕಿದು ಸಮಯವಲ್ಲ ’’ ಎಂದು ಹೇಳುವ ಮೂಲಕ ರಶ್ಯ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಸಂಘರ್ಷದ ಬಗ್ಗೆ ಅಂತ್ಯಕ್ಕೆ ಕರೆ ನೀಡಿದ್ದಾರೆ.
ಯುದ್ಧರಂಗದಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ನಮಗೆ ಸಾಧ್ಯವಾಗದು. ಎಲ್ಲೇ ಇರಲಿ, ಅಮಾಯಕ ವ್ಯಕ್ತಿಗಳನ್ನು ಹತೆಗೈಯುವುದು ಸ್ವೀಕಾರಾರ್ಹವಲ್ಲ. ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸಬೇಕೆಂದು ಭಾರತ ಹಾಗೂ ಆಸ್ಟ್ರೀಯ ಪ್ರತಿಪಾದಿಸುತ್ತದೆ. ಈ ನಿಟ್ಟಿನಲ್ಲಿ ಯಾವುದೇ ರೀತಿಯ ಬೆಂಬಲವನ್ನು ಜೊತೆಯಾಗಿ ನೀಡಲು ಎರಡೂ ದೇಶಗಳು ಸಿದ್ಧವಾಗಿವೆ’’ ಮೋದಿ ಹೇಳಿದ್ದಾರೆ.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಭಯ ನಾಯಕರು ಭಯೋತ್ಪಾದನೆಯನ್ನು ಖಂಡಿಸಿದ್ದು, ಅದು ಯಾವುದೇ ರೂಪದಲ್ಲಿದ್ದರೂ ಒಪ್ಪತಕ್ಕದ್ದಲ್ಲವೆಂದು ಹೇಳಿದರು. ‘‘ ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲಾಗದು. ಪತ್ರಿಕಾಗೋಷ್ಠಿಯಲ್ಲಿ ಆಸ್ಟ್ರಿಯಾದ ಚಾನ್ಸಲರ್ ನೆಹಾಮ್ಮೆರ್ ಮಾತನಾಡಿ ಉಭಯದೇಶಗಲ ನಡುವಿನ ಬಲಿಷ್ಠ ಬಾಂಧವ್ಯದ ಬಗ್ಗೆ ಗಮನಸೆಳೆದರು
ಭಾರತ ಹಾಗೂ ಆಸ್ಟ್ರೀಯಾದ ನಡುವಿನ ನಂಬಿಕೆಯ ನಂಟು 1950ರಲ್ಲಿ ಆರಂಭಗೊಂಡಿತ್ತು. ಭಾರತವು ಆಸ್ಟ್ರಿಯಾಕ್ಕೆ ನೆರವಾಗಿತ್ತು ಎಂದವರು ಹೇಳಿದರು. ಜಾಗತಿಕ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಬೆಳವಣಿಗೆಯಕುರಿತ ಕಾಳಜಿಯು ಭಾರತ ಹಾಗೂ ಅಮೆರಿಕವನ್ನು ಜೊತೆಗೂಡಿಸಿವೆ ಎಂದು ನೆಹಾಮ್ಮೆರ್ ತಿಳಿಸಿದರು.
---