ಉತ್ತರ ಕೊರಿಯಾ | ಹೊಸ `ಆತ್ಮಘಾತುಕ್ ಡ್ರೋನ್' ಅನಾವರಣ
ಕಿಮ್ ಜಾಂಗ್ ಉನ್ | PTI
ಪೋಂಗ್ಯಾಂಗ್ : ಉತ್ತರ ಕೊರಿಯಾವು ಹೊಸ `ಆತ್ಮಘಾತುಕ್' ಡ್ರೋನ್ ಅನ್ನು ತನ್ನ ಬತ್ತಳಿಕೆಗೆ ಸೇರಿಸಿದ್ದು ಈ ಅತ್ಯಂತ ವಿನಾಶಕಾರಿ ಡ್ರೋನ್ ಅನ್ನು ಅಧ್ಯಕ್ಷ ಕಿಮ್ ಜಾಂಗ್ ಉನ್ ಸೋಮವಾರ ಅನಾವರಣಗೊಳಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕೆಸಿಎನ್ಎಅ ಸುದ್ದಿಸಂಸ್ಥೆ ವರದಿ ಮಾಡಿದೆ.
ಡ್ರೋನ್ ನಿಗದಿತ ಗುರಿಗೆ ಪ್ರಹಾರ ಮಾಡುವುದನ್ನು ಅಧ್ಯಕ್ಷ ಕಿಮ್ ಬೈನಾಕ್ಯುಲರ್ ಮೂಲಕ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ವೀಡಿಯೊವನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಕಾರ್ಯತಂತ್ರದ ವಿಚಕ್ಷಣ ಮತ್ತು ಬಹೂಪಯೋಗಿ ಡ್ರೋನ್ಗಡಳ ಜತೆಗೆ, ಇನ್ನಷ್ಟು ಆತ್ಮಘಾತುಕ ಡ್ರೋನ್ಗಬಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ಪಾದಿಸುವ ಅಗತ್ಯವಿದೆ. ಡ್ರೋನ್ಗಡಳ ಅಭಿವೃದ್ಧಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಚಯಿಸಲು ತಮ್ಮ ದೇಶ ಕೆಲಸ ಮಾಡುತ್ತದೆ ಎಂದು ಕಿಮ್ ಹೇಳಿದ್ದಾರೆ.
ರಶ್ಯ ಈ ಡ್ರೋನ್ ಅನ್ನು ಉತ್ತರ ಕೊರಿಯಾಕ್ಕೆ ಒದಗಿಸಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಮಾರ್ಗದರ್ಶಿ ಕ್ಷಿಪಣಿಗಳಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಆತ್ಮಘಾತುಕ್ ಡ್ರೋನ್ಗ ಳು ಸ್ಫೋಟಕ ಸಾಗಿಸುವ ಜತೆಗೆ ಶತ್ರುಗಳ ಗುರಿಯ ಮೇಲೆ ನಿಖರವಾಗಿ ಅಪ್ಪಳಿಸುವ ಸಾಮಥ್ರ್ಯ ಹೊಂದಿವೆ ಎಂದು ಕೆಸಿಎನ್ಎಷ ವರದಿ ಮಾಡಿದೆ.