7 ನವಜಾತ ಶಿಶುಗಳ ಹತ್ಯೆ ಮಾಡಿದ ನರ್ಸ್; ಆರೋಪ ಸಾಬೀತು
ಸಾಂದರ್ಭಿಕ ಚಿತ್ರ.| Photo: PTI
ಲಂಡನ್: ಲಂಡನ್ ನ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಲೂಸಿ ಲೆಟ್ಬಿ 7 ನವಜಾತ ಶಿಶುಗಳನ್ನು ಹತ್ಯೆ ಮಾಡಿದ ಜತೆಗೆ ಆರು ಶಿಶುಗಳ ಹತ್ಯೆಗೆ ಯೋಜನೆ ರೂಪಿಸಿದ ಆರೋಪ ಸಾಬೀತಾಗಿದೆ ಎಂದು ಉತ್ತರ ಇಂಗ್ಲಂಡ್ ನ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ನ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ವಾಯವ್ಯ ಇಂಗ್ಲೆಂಡಿನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ನರ್ಸ್ ಆಗಿದ್ದ ಲೂಸಿ 2015ರ ಜೂನ್ನಿಂದ 2016ರ ಜೂನ್ ಅವಧಿಯಲ್ಲಿ ಅಸ್ವಸ್ಥ ಅಥವಾ ಅವಧಿಗೆ ಮುನ್ನ ಜನಿಸಿರುವ ನವಜಾತ ಶಿಶುಗಳಿಗೆ ಅಗತ್ಯಕ್ಕಿಂತ ಹೆಚ್ಚು ಹಾಲು ಕುಡಿಸಿದ ಬಳಿಕ ಆ ಶಿಶುಗಳಿಗೆ ವಿಷಸೇರಿಸಿದ ಇಂಜೆಕ್ಷನ್ ನೀಡಿ ಸಾಯಿಸುತ್ತಿದ್ದಳು. ಸರಣಿ ಸಾವಿನ ಬಳಿಕ ಲೂಸಿಯನ್ನು ಬಂಧಿಸಿ ಕಳೆದ ಅಕ್ಟೋಬರ್ನಲ್ಲಿ ವಿಚಾರಣೆ ಆರಂಭಿಸಲಾಗಿತ್ತು.
Next Story