ಫೆಲೆಸ್ತೀನ್ ಸಮಸ್ಯೆಗೆ `ಒಂದು ರಾಷ್ಟ್ರ ಪರಿಹಾರ': ಪಾಕ್ ಅಧ್ಯಕ್ಷರ ಹೇಳಿಕೆ
Photo: Canva
ಇಸ್ಲಮಾಬಾದ್: ಫೆಲೆಸ್ತೀನ್ ಸಮಸ್ಯೆಗೆ `ಒಂದು ರಾಷ್ಟ್ರ ಪರಿಹಾರ' ಸೂತ್ರವನ್ನು ಪ್ರಸ್ತಾಪಿಸಿ ಪಾಕ್ ಅಧ್ಯಕ್ಷ ಆರಿಫ್ ಆಲ್ವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ಉಸ್ತುವಾರಿ ಸರಕಾರ, ಅಧ್ಯಕ್ಷರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ ಮತ್ತು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿದೆ. ಫೆಲೆಸ್ತೀನ್ ಸಮಸ್ಯೆಗೆ `ಎರಡು ರಾಷ್ಟ್ರಗಳ ಪರಿಹಾರ' ಸೂತ್ರದಿಂದ ಪಾಕ್ ಹಿಂದೆ ಸರಿದಿಲ್ಲ ಎಂದು ಸರಕಾರ ಸ್ಪಷ್ಟನೆ ನೀಡಿದೆ.
ನ. 17ರಂದು ಅಧ್ಯಕ್ಷರ ಕಚೇರಿ ನೀಡಿರುವ ಹೇಳಿಕೆ ಎಲ್ಲಾ ಟಿವಿ ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧ್ಯಕ್ಷರ ಕಚೇರಿ, ಹೇಳಿಕೆ ಹಿಂಪಡೆದು ಹೊಸ ಹೇಳಿಕೆ ಬಿಡುಗಡೆಗೊಳಿಸಿದ್ದು ಅದರಲ್ಲಿ ವಿವಾದಾತ್ಮಕ ಪ್ರಸ್ತಾವನೆಯ ಬಗ್ಗೆ ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ.
Next Story