ನವಾಝ್ ಷರೀಫ್ ಆಸ್ತಿ ಮೇಲಿನ ನಿರ್ಬಂಧ ರದ್ದುಗೊಳಿಸಲು ಆದೇಶ
Photo : twitter/NawazSharifMNS
ಇಸ್ಲಮಾಬಾದ್ : ತೋಷಖಾನ ಉಲ್ಲೇಖ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಷರೀಫ್ ಅವರ ಆಸ್ತಿಗಳ ಮೇಲಿನ ನಿರ್ಬಂಧ ರದ್ದುಗೊಳಿಸುವಂತೆ ಇಸ್ಲಮಾಬಾದ್ ವಿಶೇಷ ನ್ಯಾಯಾಲಯ ಶುಕ್ರವಾರ ಅಧಿಕಾರಿಗಳಿಗೆ ಆದೇಶಿಸಿದೆ ಎಂದು ಎಆರ್ಐ ನ್ಯೂಸ್ ವರದಿ ಮಾಡಿದೆ.
2020ರಲ್ಲಿ ತೋಷಖಾನಾ ಪ್ರಕರಣದಲ್ಲಿ ತನ್ನನ್ನು ಘೋಷಿತ ಅಪರಾಧಿ ಎಂದು ಪ್ರಕಟಿಸಿದ ಬಳಿಕ ತನ್ನ ಆಸ್ತಿಗಳನ್ನು ಸ್ಥಂಭನಗೊಳಿಸಿದ್ದ ಪಂಜಾಬ್ ಪ್ರಾಂತೀಯ ಸರಕಾರದ ಕ್ರಮವನ್ನು ರದ್ದುಗೊಳಿಸುವಂತೆ ಕೋರಿ ನವಾಝ್ ಷರೀಫ್ `ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೊ(ಎನ್ಎಬಿ)ಗೆ ಅರ್ಜಿ ಸಲ್ಲಿಸಿದ್ದರು. ಇದೇ ಪ್ರಕರಣದಲ್ಲಿ ನಿರಂತರ ವಿಚಾರಣೆಗೆ ಗೈರು ಹಾಜರಾಗುತ್ತಿದ್ದ ಷರೀಫ್ ವಿರುದ್ಧ ಜಾರಿಗೊಳಿಸಿರುವ ಬಂಧನ ವಾರಂಟ್ ಅನ್ನು ಅ.19ರಂದು ಅಮಾನತುಗೊಳಿಸಲಾಗಿದೆ.
Next Story