ಪಾಕಿಸ್ತಾನ | ಶಿಯಾ-ಸುನ್ನಿ ಸಂಘರ್ಷದಲ್ಲಿ 16 ಮಂದಿ ಮೃತ್ಯು
Pakistan flag. Credit: PTI File Photo
ಇಸ್ಲಾಮಾಬಾದ್ : ವಾಯವ್ಯ ಪಾಕಿಸ್ತಾನದ ಖೈಬರ್ ಪಖ್ತೂಂಕ್ವಾ ಪ್ರಾಂತದ ಕುರ್ರಂ ಜಿಲ್ಲೆಯಲ್ಲಿ ಶನಿವಾರ ಶಿಯಾ-ಸುನ್ನಿ ಸಮುದಾಯದ ಗುಂಪಿನ ನಡುವೆ ನಡೆದ ಸಂಘರ್ಷದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಸಹಿತ ಕನಿಷ್ಠ 16 ಮಂದಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕುರ್ರಂ ಜಿಲ್ಲೆಯಲ್ಲಿ ಶಿಯಾ ಮತ್ತು ಸುನ್ನಿ ಮುಸ್ಲಿಂ ಬುಡಕಟ್ಟುಗಳ ನಡುವೆ ಹಲವು ತಿಂಗಳುಗಳಿಂದ ತೀವ್ರ ಸಂಘರ್ಷ ನಡೆಯುತ್ತಿದೆ. ಸುನ್ನಿ ಸಮುದಾಯದವರ ವಾಹನಗಳು ಅರೆಸೇನಾ ಪಡೆಯ ರಕ್ಷಣೆಯಲ್ಲಿ ಸಾಗುತ್ತಿದ್ದಾಗ ಕುರ್ರಂ ಜಿಲ್ಲೆಯಲ್ಲಿ ಗುಂಡಿನ ದಾಳಿಗೆ ಗುರಿಯಾಗಿವೆ. ದಾಳಿಯಲ್ಲಿ ಮೂವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಸಹಿತ 14 ಮಂದಿ ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ.
ಭದ್ರತಾ ಪಡೆ ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ ಎಂದು ಕುರ್ರಂ ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story