ಪಾಕಿಸ್ತಾನ | ಬಲೂಚಿಸ್ತಾನದಲ್ಲಿ ಬಂಡುಕೋರರ ಸರಣಿ ದಾಳಿ ; ಕನಿಷ್ಠ 37 ಮಂದಿ ಮೃತ್ಯು ; 5 ಮಂದಿಗೆ ಗಾಯ
12 ಬಂಡುಕೋರರ ಹತ್ಯೆಗೈದ ಭದ್ರತಾ ಪಡೆ
PC : PTI
ಇಸ್ಲಾಮಾಬಾದ್ : ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದಲ್ಲಿ ಬಂದೂಕುಧಾರಿಗಳು ಪೊಲೀಸ್ ಠಾಣೆಗಳು, ರೈಲು ಹಳಿಗಳು ಮತ್ತು ವಾಹನಗಳ ಮೇಲೆ ದಾಳಿ ನಡೆಸಿದ್ದರಿಂದ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ. ಬಳಿಕ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 12 ಬಂಡುಕೋರರನ್ನು ಹತ್ಯೆ ಮಾಡಲಾಗಿದೆ. ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತದಲ್ಲಿ ನಡೆದಿರುವ ಅತೀ ದೊಡ್ಡ ಸಶಸ್ತ್ರ ದಾಳಿ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಲೂಚಿಸ್ತಾನ್ ಪ್ರತ್ಯೇಕತಾವಾದಿಗಳ ಗುಂಪು `ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್ಎತ) ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ರವಿವಾರ ರಾತ್ರಿ ಬಲೂಚಿಸ್ತಾನದ ಮುಸಖೈಲ್ ಜಿಲ್ಲೆಯಲ್ಲಿ ಪಂಜಾಬ್ ಮತ್ತು ಬಲೂಚಿಸ್ತಾನವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಹಲವು ವಾಹನಗಳ ಮೇಲೆ ಗುರುತಿಸಲಾಗದ ಬಂದೂಕುಧಾರಿಗಳು ದಾಳಿ ನಡೆಸಿದ್ದರಿಂದ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದು ಇತರ 5 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಯೂಬ್ ಅಚಕ್ಝಾದಯ್ ಹೇಳಿದ್ದಾರೆ. ಕನಿಷ್ಠ 10 ವಾಹನಗಳಿಗೆ ಬೆಂಕಿ ಹಚ್ಚಿದ ಬಳಿಕ ದಾಳಿಕೋರರು ಪರಾರಿಯಾಗಿದ್ದಾರೆ.
ಬಂದೂಕುಧಾರಿಗಳು ಹಲವಾರು ಬಸ್ಸುಗಳು, ಟ್ರಕ್ಗ್ಳು ಹಾಗೂ ವ್ಯಾನ್ಗಹಳನ್ನು ನಿಲ್ಲಿಸಿದ್ದಾರೆ. ಬಳಿಕ ಅದರಲ್ಲಿದ್ದ ಪ್ರಯಾಣಿಕರ ಗುರುತು ಪತ್ರವನ್ನು ಪಡೆದುಕೊಂಡು ಅವರ ಜನಾಂಗೀಯತೆಯನ್ನು ಪರೀಕ್ಷಿಸಿದ ಬಳಿಕ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಪಂಜಾಬ್ಗೆರ ತೆರಳುವ ಮತ್ತು ಅಲ್ಲಿಂದ ಆಗಮಿಸುವ ವಾಹನಗಳ ಮೇಲೆ ಮಾತ್ರ ದಾಳಿ ನಡೆದಿದೆ. ಪಂಜಾಬ್ನಾ ನಿವಾಸಿಗಳನ್ನು ಗುರುತಿಸಿ ಅವರನ್ನು ವಾಹನದಿಂದ ಕೆಳಗೆ ಇಳಿಸಿದ ಬಳಿಕ ಗುಂಡು ಹಾರಿಸಲಾಗಿದೆ. ಬಂಡುಕೋರರು 10 ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಇದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್ಎರ)ಯ ಕೃತ್ಯವಾಗಿರಬಹುದು ಎಂದು ಹಿರಿಯ ಅಧಿಕಾರಿ ನಜೀಬುಲ್ಲಾ ಕಾಕರ್ರದನ್ನು ಉಲ್ಲೇಖಿಸಿ ಎಎಫ್ಪಿ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮತ್ತೊಂದು ಪ್ರತ್ಯೇಕ ದಾಳಿಯಲ್ಲಿ, ಬಲೂಚಿಸ್ತಾನದ ಖಲತ್ ಜಿಲ್ಲೆಯಲ್ಲಿ ಬಂದೂಕುಧಾರಿಗಳ ದಾಳಿಯಲ್ಲಿ 4 ಪೊಲೀಸ್ ಅಧಿಕಾರಿಗಳ ಸಹಿತ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಬೊಲಾನ್ ನಗರದಲ್ಲಿ ಬಂಡುಗೋರರು ರೈಲು ಹಳಿಯನ್ನು ಸ್ಫೋಟಿಸಿದ್ದು ಈ ಪ್ರದೇಶದಲ್ಲಿ 6 ಮಂದಿಯ ಮೃತದೇಹ ಪತ್ತೆಯಾಗಿದೆ. ಮಸ್ತುಂಗ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರೆ, ಗ್ವದರ್ನಾಲ್ಲಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಝ್ ಬುಗ್ತಿ ಘಟನೆಯನ್ನು ಖಂಡಿಸಿದ್ದು ಭಯೋತ್ಪಾದಕರು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಝರ್ದಾರಿ, ಪ್ರಧಾನಿ ಶಹಬಾಝ್ ಷರೀಫ್, ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಘಟನೆಯನ್ನು ಖಂಡಿಸಿದ್ದಾರೆ.
► ಮುನ್ನೆಚ್ಚರಿಕೆ ನೀಡಿ ದಾಳಿ
ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ದೀರ್ಘಾವಧಿಯಿಂದ ದಂಗೆ, ದಾಳಿ, ಗಲಭೆ ನಡೆಯುತ್ತಿದ್ದು ಪ್ರತ್ಯೇಕತಾವಾದಿಗಳ ಗುಂಪುಗಳು ಮುಖ್ಯವಾಗಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿವೆ. ಬಲೂಚಿಸ್ತಾನವು ಪಾಕಿಸ್ತಾನದಿಂದ ಸ್ವತಂತ್ರಗೊಳ್ಳಬೇಕು ಎಂದು ಪ್ರತ್ಯೇಕತಾವಾದಿಗಳು ಪ್ರತಿಪಾದಿಸುತ್ತಿದ್ದಾರೆ. ಬಂಡುಗೋರ ಚಟುವಟಿಕೆಯನ್ನು ನಿಯಂತ್ರಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದರೂ ಬಲೂಚಿಸ್ತಾನದಲ್ಲಿ ಹಿಂಸಾಚಾರ ಮುಂದುವರಿದಿದೆ.
ಮುಸಖೈಲ್ ಜಿಲ್ಲೆಯಲ್ಲಿ ವಾಹನಗಳ ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ನಿಷೇಧಿತ `ಬಲೂಚ್ ಲಿಬರೇಷನ್ ಆರ್ಮಿ' (ಬಿಎಲ್ಎಲ) ಪ್ರತ್ಯೇಕತಾವಾದಿಗಳ ಗುಂಪು, ಹೆದ್ದಾರಿಗಳಿಂದ ದೂರ ಇರುವಂತೆ ಜನರಿಗೆ ಎಚ್ಚರಿಕೆ ನೀಡಿತ್ತು ಎಂದು ವರದಿಯಾಗಿದೆ. ಆದರೆ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ವಹಿಸಿಲ್ಲ. ಬಲೂಚಿಸ್ತಾನ ಪ್ರಾಂತದಲ್ಲಿ ನಡೆಸಿದ ದಾಳಿಯಲ್ಲಿ ಭದ್ರತಾ ಪಡೆಗಳಿಗೆ ಭಾರೀ ನಷ್ಟವಾಗಿದೆ ಎಂದು ಬಿಎಲ್ಎ ಸೋಮವಾರ ಹೇಳಿಕೆ ನೀಡಿದೆ.