ಪಾಕಿಸ್ತಾನ ಏರ್ಲೈನ್ಸ್ ಮಾರಾಟ ಪ್ರಕ್ರಿಯೆ: ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಕೆ
PC : ANI
ಇಸ್ಲಮಾಬಾದ್: ಸಾಲದ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನ್ ಏರ್ಲೈನ್ಸ್ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಶುಕ್ರವಾರ ತೀವ್ರ ಹಿನ್ನಡೆಯಾಗಿದೆ. ಖರೀದಿಗಾರರು ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಸಲ್ಲಿಸಿರುವುದಾಗಿ ವರದಿಯಾಗಿದೆ.
85 ಶತಕೋಟಿ ರೂಪಾಯಿ(ಪಾಕಿಸ್ತಾನದ ಕರೆನ್ಸಿ) ಕನಿಷ್ಟ ಬಿಡ್ ಎಂದು ಪಾಕ್ ಸರಕಾರ ನಿಗದಿಗೊಳಿಸಿತ್ತು. ಆದರೆ ಅಂತಿಮ ಹಂತದ ಹರಾಜು ಪ್ರಕ್ರಿಯೆಯಲ್ಲಿದ್ದ ಏಕೈಕ ಸಂಸ್ಥೆ ಕೇವಲ 10 ಶತಕೋಟಿ ರೂ.(ಪಾಕ್ ಕರೆನ್ಸಿ)ಗೆ ಬಿಡ್ ಸಲ್ಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಅಂತಿಮ ಹಂತದ ಹರಾಜು ಪ್ರಕ್ರಿಯೆಗೆ 6 ಸಂಸ್ಥೆಗಳನ್ನು ಜೂನ್ನಲ್ಲಿ ಪಾಕ್ ಸರಕಾರ ಅಂತಿಮಗೊಳಿಸಿತ್ತು. ಆದರೆ `ಬ್ಲೂವರ್ಡ್ ಸಿಟಿ' ರಿಯಲ್ ಎಸ್ಟೇಟ್ ಸಂಸ್ಥೆ ಮಾತ್ರ ಹರಾಜಿನಲ್ಲಿ ಪಾಲ್ಗೊಂಡಿದ್ದು 10 ಶತಕೋಟಿ ಡಾಲರ್ಗೆ ಬಿಡ್ ಸಲ್ಲಿಸಿದೆ.
Next Story