ಲಾಹೋರ್ ವಾಯುಮಾಲಿನ್ಯಕ್ಕೆ ಭಾರತವನ್ನು ದೂಷಿಸಿದ ಪಾಕಿಸ್ತಾನ!
PC : ANI
ಇಸ್ಲಾಮಾಬಾದ್ : ಪಾಕಿಸ್ತಾನದ ಎರಡನೇ ಅತೀ ದೊಡ್ಡ ನಗರವಾದ ಲಾಹೋರ್ನಲ್ಲಿ ದಾಖಲೆ ಮಟ್ಟಕ್ಕೆ ತಲುಪಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ತುರ್ತು ಕ್ರಮಗಳನ್ನು ಕೈಗೊಂಡಿರುವ ಅಧಿಕಾರಿಗಳು ಮನೆಯಿಂದ ಕೆಲಸ(ವರ್ಕ್ ಫ್ರಂ ಹೋಮ್) ಕಡ್ಡಾಯಗೊಳಿಸಿದ್ದು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಈ ಮಧ್ಯೆ, ಲಾಹೋರ್ನಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳಲು ಭಾರತ ಕಾರಣ ಎಂದು ಪಂಜಾಬ್ ಪ್ರಾಂತೀಯ ಸರಕಾರದ ಸಚಿವೆ ಮರಿಯಮ್ ಔರಂಗಝೇಬ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಇದು ಅನಿರೀಕ್ಷಿತವಾಗಿದೆ. ನೆರೆಯ ಭಾರತದಿಂದ ಮಾಲಿನ್ಯವನ್ನು ಸಾಗಿಸುವ ಗಾಳಿಯಿಂದಾಗಿ ಲಾಹೋರ್ನಲ್ಲಿ ವಾಯುಮಾಲಿನ್ಯ ತೀವ್ರಗೊಂಡಿದೆ. ಭಾರತದ ಜತೆ ಮಾತುಕತೆ ನಡೆಸದೆ ಇದನ್ನು ಪರಿಹರಿಸಲು ಸಾಧ್ಯವಾಗದು. ಪ್ರಾಂತೀಯ ಸರಕಾರವು ದೇಶದ ವಿದೇಶಾಂಗ ಇಲಾಖೆಯ ಮೂಲಕ ತನ್ನ ನೆರೆಹೊರೆಯ ದೇಶದ ಜತೆಗೆ ಮಾತುಕತೆಗಳನ್ನು ಪ್ರಾರಂಭಿಸುತ್ತದೆ' ಎಂದು ಹೇಳಿರುವುದಾಗಿ ವರದಿಯಾಗಿದೆ.
Next Story