ಪಾಕಿಸ್ತಾನ: ಆತ್ಮಹತ್ಯಾ ಬಾಂಬ್ ದಾಳಿಗೆ ಪೊಲೀಸ್ ಮೃತ್ಯು; ಐದು ಮಂದಿಗೆ ಗಾಯ
Photo: NDTV.com
ಪೇಷಾವರ: ನೈಋತ್ಯ ಪಾಕಿಸ್ತಾನದಲ್ಲಿ ಶನಿವಾರ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಒಬ್ಬ ಪೊಲೀಸ್ ಸಿಬಂದಿ ಮೃತಪಟ್ಟಿದ್ದು ಇತರ 5 ಮಂದಿ ಗಾಯಗೊಂಡಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
ನೈಋತ್ಯ ಪಾಕಿಸ್ತಾನದ ಟುರ್ಬಟ್ ನಗರದಲ್ಲಿ ಅರೆಸೇನಾ ಪಡೆಯ ಸಿಬಂದಿಗಳು ತೆರಳುತ್ತಿದ್ದ ವಾಹನಗಳ ಸಾಲನ್ನು ಗುರಿಯಾಗಿಸಿ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾಳೆ ಎಂದು ಸ್ಥಳೀಯ ಅಧಿಕಾರಿ ಬಷೀರ್ ಅಹ್ಮದ್ ಹೇಳಿದ್ದಾರೆ.
ಅರೆಸೇನಾ ಪಡೆಯ ವಾಹನ ಆತ್ಮಹತ್ಯಾ ಬಾಂಬರ್ ನ ಗುರಿಯಾಗಿತ್ತು. ಆದರೆ ಗುರಿತಪ್ಪಿ ಪೊಲೀಸ್ ವಾಹನದ ಬಳಿ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಾಗ ವಾಹನದಲ್ಲಿದ್ದ ಓರ್ವ ಪೊಲೀಸ್ ಮೃತಪಟ್ಟಿದ್ದಾರೆ. ಮಹಿಳಾ ಪೊಲೀಸ್ ಸಹಿತ ಐದು ಮಂದಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
Next Story