ಪಾಕಿಸ್ತಾನ: ಭದ್ರತಾ ಬೆದರಿಕೆ, ಮೂರು ವಿವಿಗಳು ಬಂದ್
ಸಾಂದರ್ಭಿಕ ಚಿತ್ರ | Photo: NDTV
ಇಸ್ಲಮಾಬಾದ್: ಪಾಕಿಸ್ತಾನದ ಮಿಲಿಟರಿಯೊಂದಿಗೆ ಸಂಯೋಜಿತವಾಗಿರುವ ಮೂರು ವಿಶ್ವ ವಿದ್ಯಾಲಯಗಳನ್ನು ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ ಎಂದು ಎಎಫ್ಪಿ ಸುದ್ಧಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಇಸ್ಲಮಾಬಾದ್ನ `ದಿ ನ್ಯಾಷನಲ್ ಡಿಫೆನ್ಸ್ ವಿವಿ, ಬಹ್ರಿಯಾ ವಿವಿ ಮತ್ತು ಏರ್ ಯುನಿವರ್ಸಿಟಿ'ಗಳನ್ನು ಸಂಭಾವ್ಯ ಬೆದರಿಕೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಮನೆಯಿಂದಲೇ ಕೆಲಸ ಮಾಡಲಿದ್ದಾರೆ' ಎಂದು ಹೇಳಿಕೆ ತಿಳಿಸಿದೆ. ಈ ಮೂರು ವಿವಿಗಳು ಅನುಕ್ರಮವಾಗಿ ಭೂಸೇನೆ, ನೌಕಾ ಸೇನೆ ಮತ್ತು ವಾಯುಪಡೆಯೊಂದಿಗೆ ಸಂಯೋಜಿತಗೊಂಡಿವೆ. ಪಾಕಿಸ್ತಾನದಲ್ಲಿ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಬಿಕ್ಕಟ್ಟಿನ ನಡುವೆಯೇ ಮುಂದಿನ ತಿಂಗಳು ಸಾರ್ವತ್ರಿಕ ಚುನಾವಣೆ ನಿಗದಿಯಾಗಿರುವಂತೆಯೇ ಪೊಲೀಸರು ಹಾಗೂ ಯೋಧರನ್ನು ಗುರಿಯಾಗಿಸಿದ ಭಯೋತ್ಪಾದಕ ದಾಳಿಗಳು ಹೆಚ್ಚಿದೆ.
Next Story