130 ಭಾರತೀಯ ವಲಸಿಗರನ್ನು ಗಡೀಪಾರು ಮಾಡಿದ ಪನಾಮ

ಪನಾಮದ ವಲಸೆ ಇಲಾಖೆಯ ನಿರ್ದೇಶಕ ರೋಜರ್ ಮೊಜಿಕಾ | PC : X/@senafrontpanama
ಪನಾಮ ಸಿಟಿ : ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಭಾರತದ 130 ವಲಸಿಗರನ್ನು ಬಾಡಿಗೆ ವಿಮಾನದ ಮೂಲಕ ಭಾರತಕ್ಕೆ ಗಡೀಪಾರು ಮಾಡಿರುವುದಾಗಿ ಪನಾಮದ ವಲಸೆ ಇಲಾಖೆಯ ನಿರ್ದೇಶಕ ರೋಜರ್ ಮೊಜಿಕಾ ಹೇಳಿದ್ದಾರೆ.
ಡೇರಿಯನ್ ಅರಣ್ಯದ ಮೂಲಕ ಪನಾಮವನ್ನು ಪ್ರವೇಶಿಸಿದ್ದ ಅಕ್ರಮ ವಲಸಿಗರನ್ನು ಕಳೆದ ಜುಲೈಯಲ್ಲಿ ಅಮೆರಿಕದ ಜತೆ ಮಾಡಿಕೊಂಡ ಒಪ್ಪಂದದ ಪ್ರಕಾರ ಗಡೀಪಾರು ಮಾಡಲಾಗಿದೆ. ಇದರೊಂದಿಗೆ ಎರಡು ವಾರಗಳಲ್ಲಿ ಪನಾಮಾ 219 ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಿದಂತಾಗಿದೆ.
ದಕ್ಷಿಣದ ಗಡಿಭಾಗದಲ್ಲಿ ಅಕ್ರಮವಾಗಿ ಒಳನುಸುಳುವ ವಲಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಲು ನಿರ್ಧರಿಸಿರುವ ಅಮೆರಿಕ ಮಧ್ಯ ಅಮೆರಿಕನ್ ದೇಶಗಳಿಂದ ವಲಸೆಗಾರರ ವಾಪಸಾತಿ ಪ್ರಕ್ರಿಯೆಗೆ 6 ದಶಲಕ್ಷ ಮಿಲಿಯನ್ ಡಾಲರ್ ಅನುದಾನದ ವಾಗ್ದಾನ ನೀಡಿದೆ.
Next Story