ಫಿಲಿಪ್ಪೀನ್ಸ್ | ಹಣಕ್ಕಾಗಿ ಪ್ರವಾಸಿಗರ ಅಪಹರಣ ; ಪೊಲೀಸರ ಬಂಧನ
ಸಾಂದರ್ಭಿಕ ಚಿತ್ರ
ಮನಿಲಾ : ನಾಲ್ವರು ಪ್ರವಾಸಿಗರನ್ನು ಅಪಹರಿಸಿ ಒತ್ತೆಹಣಕ್ಕೆ ಆಗ್ರಹಿಸಿದ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿರುವುದಾಗಿ ಫಿಲಿಪ್ಪೀನ್ಸ್ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ಮೂವರು ಚೀನಾ ಪ್ರಜೆಗಳು ಹಾಗೂ ಓರ್ವ ಮಲೇಶ್ಯಾ ಪ್ರಜೆ ಮನಿಲಾಕ್ಕೆ ಭೇಟಿ ನೀಡಿದ್ದು ಕಾರೊಂದರಲ್ಲಿ ತೆರಳುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಪೊಲೀಸ್ ಅಧಿಕಾರಿಗಳು ಅವರ ಕೈಗಳನ್ನು ಕಟ್ಟಿ ವ್ಯಾನೊಂದರಲ್ಲಿ ಅಪಹರಿಸಿದ್ದರು. ಇವರಲ್ಲಿ ಇಬ್ಬರು ತಪ್ಪಿಸಿಕೊಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇತರ ಇಬ್ಬರನ್ನು ರಾತ್ರಿಯಿಡೀ ಕೂಡಿಹಾಕಿ ಥಳಿಸಲಾಗಿದ್ದು 43,000 ಡಾಲರ್ ಹಣ ಪಡೆದ ಬಳಿಕ ಬಿಡುಗಡೆಗೊಳಿಸಿದ್ದರು.
ಪ್ರವಾಸಿಗರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳ ವೀಡಿಯೊ ಪರಿಶೀಲಿಸಿ ಆರೋಪಿ ಪೊಲೀಸರನ್ನು ಬಂಧಿಸಿರುವುದಾಗಿ ಫಿಲಿಪ್ಪೀನ್ಸ್ನ ಆಂತರಿಕ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
Next Story