ಫಿಲಿಪ್ಪೀನ್ಸ್ | ಎಂಫಾಕ್ಸ್ ಪ್ರಥಮ ಪ್ರಕರಣ ಪತ್ತೆ
ಸಾಂದರ್ಭಿಕ ಚಿತ್ರ
ಮನಿಲಾ : ಫಿಲಿಪ್ಪೀನ್ಸ್ ನಲ್ಲಿ ಎಂಫಾಕ್ಸ್ ವೈರಸ್ನ ಹೊಸ ಪ್ರಕರಣ ಪತ್ತೆಯಾಗಿದ್ದು ಕಳೆದ ಡಿಸೆಂಬರ್ ಬಳಿಕ ದೇಶದಲ್ಲಿ ದಾಖಲಾಗಿರುವ ಪ್ರಥಮ ಎಂಫಾಕ್ಸ್ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದು ಯಾವ ತಳಿಗೆ ಸೇರಿದ ವೈರಸ್ ಎಂಬುದನ್ನು ಪರೀಕ್ಷೆಯ ವರದಿ ದೃಢಪಡಿಸಲಿದೆ. 33 ವರ್ಷದ ಫಿಲಿಪ್ಪೀನ್ಸ್ ಪ್ರಜೆಯಲ್ಲಿ ವೈರಸ್ ಪತ್ತೆಯಾಗಿದ್ದು ಈತ ದೇಶದಿಂದ ಹೊರಗೆ ಯಾವುದೇ ಪ್ರಯಾಣ ಬೆಳೆಸಿದ ದಾಖಲೆಗಳಿಲ್ಲ. ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಫಿಲಿಪ್ಪೀನ್ಸ್ ಆರೋಗ್ಯ ಇಲಾಖೆಯ ವಕ್ತಾರ ಆಲ್ಬರ್ಟ್ ಡೊಮಿಂಗೋ ಹೇಳಿದ್ದಾರೆ.
ಮಂಕಿಫಾಕ್ಸ್ ವೈರಸ್ ನಿಂದ ಉಂಟಾಗುವ ಈ ರೋಗವು ಜ್ವರದ ರೀತಿಯ ರೋಗಲಕ್ಷಣಗಳಿಗೆ ಮತ್ತು ಕೀವು ತುಂಬಿದ ಗಾಯಗಳಿಗೆ ಕಾರಣವಾಗುತ್ತದೆ. ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವವರು ಎಂಫಾಕ್ಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ.
Next Story