ಸಣ್ಣ ವಿಮಾನ ʼಹೈಜಾಕ್ʼ ಮಾಡಿದ ಅಮೆರಿಕ ಪ್ರಜೆಯನ್ನು ಗುಂಡಿಕ್ಕಿ ಹತ್ಯೆಗೈದ ಸಹ ಪ್ರಯಾಣಿಕ

ಸಾಂದರ್ಭಿಕ ಚಿತ್ರ | PC : freepik.com
ಬೆಲಿಝ್ ನಗರ: ಚಾಕುವಿನಿಂದ ಮೂವರ ಮೇಲೆ ಹಲ್ಲೆ ನಡೆಸಿ, ಬೆಲಿಝ್ನಿಂದ ಸಣ್ಣ ವಿಮಾನವೊಂದನ್ನು ಅಪಹರಿಸಿದ್ದ ಅಮೆರಿಕ ಪ್ರಜೆಯೊಬ್ಬನನ್ನು ಗುರುವಾರ ಸಹ ಪ್ರಯಾಣಿಕರೊಬ್ಬರು ಗುಂಡಿಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತ ಚೆಸ್ಟರ್ ವಿಲಿಯಂ, ವಿಮಾನವು ವಾಯು ಮಾರ್ಗದಲ್ಲಿ ಸಂಚರಿಸುತ್ತಿದ್ದ ವೇಳೆ ಚಾಕುವನ್ನು ಹೊರ ತೆಗೆದಿದ್ದ ದುಷ್ಕರ್ಮಿಯು, ದೇಶೀಯ ವಿಮಾನವನ್ನು ದೇಶದಿಂದ ಹೊರಗೆ ಕೊಂಡೊಯ್ಯಬೇಕು ಎಂದು ಆಗ್ರಹಿಸಿದ್ದ ಎಂದು ತಿಳಿಸಿದ್ದಾರೆ.
ವಿಮಾನ ಅಪಹರಣಕಾರನನ್ನು ಅಮೆರಿಕ ಪ್ರಜೆ ಅಕಿನ್ಯೇಲ ಸಾವಾ ಟೇಲರ್ ಎಂದು ಗುರುತಿಸಲಾಗಿದ್ದು, ಆತ ಮಾಜಿ ಸೇನಾ ಯೋಧನಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಉತ್ತರ ಬೆಲಿಝ್ ಹಾಗೂ ರಾಜಧಾನಿ ಬೆಲಿಝ್ ನಗರದ ನಡುವೆ ಆಕಾಶದಲ್ಲಿ ಸುತ್ತು ಹೊಡೆಯುತ್ತಿದ್ದ ವಿಮಾನವು, ಇಂಧನದ ಕೊರತೆಯುಂಟಾಗಿ ಅಪಾಯಕಾರಿಯಾಗಿ ಕೆಳಗಿಳಿಯತೊಡಗಿತ್ತು ಎಂದು ಅವರು ತಿಳಿಸಿದ್ದಾರೆ.
Next Story