ಭಾರತೀಯ ಪಾದ್ರಿಯನ್ನು ಕಾರ್ಡಿನಲ್ ಶ್ರೇಣಿಗೆ ಉನ್ನತೀಕರಿಸಿದ ಪೋಪ್
ಭಾರತೀಯ ಪಾದ್ರಿ ಜಾರ್ಜ್ ಕೂವಕಾಡ್, ಪೋಪ್ ಫ್ರಾನ್ಸಿಸ್ ,| PC : X/@narendramodi
ವ್ಯಾಟಿಕನ್: ಶನಿವಾರ ವ್ಯಾಟಿಕನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಪ್ ಫ್ರಾನ್ಸಿಸ್ ಅವರು 51 ವರ್ಷದ ಭಾರತೀಯ ಪಾದ್ರಿ ಜಾರ್ಜ್ ಕೂವಕಾಡ್ ಅವರನ್ನು ಕಾರ್ಡಿನಲ್ ಶ್ರೇಣಿಗೆ ಉನ್ನತೀಕರಿಸಿರುವುದಾಗಿ ವರದಿಯಾಗಿದೆ.
ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತದ ಪಾದ್ರಿಗಳು ಮತ್ತು ಗಣ್ಯರು ಭಾಗವಹಿಸಿದ್ದು ವಿವಿಧ ದೇಶಗಳ 21 ಹೊಸ ಕಾರ್ಡಿನಲ್ಗಳ ಸೇರ್ಪಡೆಗೆ ಸಾಕ್ಷಿಯಾದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪೋಪ್ ನಿಯೋಜಿತ ಕಾರ್ಡಿನಲ್ಗಳಿಗೆ ವಿಧ್ಯುಕ್ತ ಕ್ಯಾಪ್ ಮತ್ತು ಉಂಗುರವನ್ನು ಹಸ್ತಾಂತರಿಸಿದರು. ಬಳಿಕ ಪ್ರಾರ್ಥನೆಯೊಂದಿಗೆ ಪ್ರಮಾಣ ಪತ್ರವನ್ನು ನೀಡಿದರು.
ಕೇರಳದ ಚಂಗನಾಸ್ಸೆರಿ ಆರ್ಚಿಡಯಾಸಿಸ್ನಿಂದ ಬಂದಿರುವ ಜಾರ್ಜ್ ಕೂವಕಾಡ್ ನೇಮಕಾತಿಯೊಂದಿಗೆ ಭಾರತೀಯ ಕಾರ್ಡಿನಲ್ಗಳ ಸಂಖ್ಯೆ 6ಕ್ಕೆ ಏರಿದೆ. ಪ್ರಧಾನಿ ನರೇಂದ್ರ ಮೋದಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಭಾರತದಾದ್ಯಂತದ ಚರ್ಚ್ಗಳ ಮುಖ್ಯಸ್ಥರು ಪೋಪ್ ಅವರ ಕ್ರಮವನ್ನು ಸ್ವಾಗತಿಸಿ, ಕೂವಕಾಡ್ ಅವರನ್ನು ಅಭಿನಂದಿಸಿದ್ದಾರೆ.