ಈಸ್ಟರ್ ಸಂದೇಶದಲ್ಲಿ ಗಾಝಾ ಕದನ ವಿರಾಮಕ್ಕೆ ಕರೆ ನೀಡಿದ ಪೋಪ್
Photo :PTI
ವ್ಯಾಟಿಕನ್: ವ್ಯಾಟಿಕನ್ ಸಿಟಿಯ ಸೈಂಟ್ ಪೀಟರ್ಸ್ ಚರ್ಚ್ನ ಸೆಂಟ್ರಲ್ ಬಾಲ್ಕನಿಯಲ್ಲಿ ರವಿವಾರ ಈಸ್ಟರ್ ಸಂದೇಶ ನೀಡಿದ ಪೋಪ್ ಫ್ರಾನ್ಸಿಸ್, ಗಾಝಾದಲ್ಲಿ ತಕ್ಷಣ ಕದನವಿರಾಮ ಜಾರಿಗೆ ಜಾಗತಿಕ ಸಮುದಾಯ ಒಗ್ಗೂಡಿ ಪ್ರಯತ್ನಿಸುವಂತೆ ಕರೆ ನೀಡಿದ್ದಾರೆ.
ಯುದ್ಧ, ಸಂಘರ್ಷದಿಂದ ಆಗುತ್ತಿರುವ ಸಾವು-ನೋವುಗಳ ಬಗ್ಗೆ ವಿಷಾದ ಸೂಚಿಸಿದ ಪೋಪ್, ಗಾಝಾಕ್ಕೆ ಮಾನವೀಯ ನೆರವಿನ ವಿತರಣೆ ಸರಾಗವಾಗಿ ಮತ್ತು ಸುಸೂತ್ರವಾಗಿ ನಡೆಯುವುದನ್ನು ಖಾತರಿಪಡಿಸಲು, ಒತ್ತೆಯಾಳುಗಳ ಸುರಕ್ಷಿತ ಬಿಡುಗಡೆ ಮತ್ತು ಗಾಝಾದಲ್ಲಿ ತಕ್ಷಣ ಕದನ ವಿರಾಮಕ್ಕೆ ಕರೆ ನೀಡಿದರು.
`ಮಕ್ಕಳ ಕಣ್ಣುಗಳು ಇನ್ನೆಷ್ಟು ಸಂಕಟಗಳನ್ನು ನೋಡಬೇಕು. ಆ ಯುದ್ಧವಲಯದಲ್ಲಿನ ಮಕ್ಕಳು ನಗುವುದನ್ನೇ ಮರೆತಿದ್ದಾರೆ. ` ಇಷ್ಟೆಲ್ಲಾ ಸಾವು ಯಾಕೆ, ವಿನಾಶ ಯಾಕೆ?' ಎಂದು ತಮ್ಮ ಕಣ್ಣುಗಳ ಮೂಲಕ ಈ ಮಕ್ಕಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಯುದ್ಧವೆಂದರೆ ಯಾವತ್ತೂ ಅಸಂಬದ್ಧತೆ ಮತ್ತು ಸೋಲು' ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
Next Story