ಇಸ್ರೇಲ್ ಗೆ ಪ್ರಾಯೋಗಿಕ ಬೆಂಬಲ: ನೇಟೊ
Photo: PTI
ಬ್ರಸೆಲ್ಸ್: ಇಸ್ರೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಖಂಡನೀಯ. ಆದರೆ ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸುವ ಪ್ರತಿದಾಳಿ ಪ್ರಮಾಣಕ್ಕೆ ಅನುಗುಣವಾಗಿರಬೇಕು ಎಂದು ನೇಟೊ ದೇಶಗಳು ಗುರುವಾರ ಒತ್ತಾಯಿಸಿವೆ.
ನೇಟೊ ದೇಶಗಳು ಇಸ್ರೇಲ್ ಜತೆ ನಿಲ್ಲಲಿವೆ ಮತ್ತು ಇಸ್ರೇಲ್ ಗೆ ಪ್ರಾಯೋಗಿಕ ಬೆಂಬಲ ಮುಂದುವರಿಸಲಿವೆ’ ಎಂದು ನೇಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್ಬರ್ಗ್ ಹೇಳಿದ್ದಾರೆ.
ಮಿತ್ರದೇಶಗಳು ಇಸ್ರೇಲ್ ಗೆ ಬೆಂಬಲ ಪುನರುಚ್ಚರಿಸಿವೆ ಮತ್ತು ಈ ಅಸಮರ್ಥನೀಯ ಭಯೋತ್ಪಾದಕ ಕೃತ್ಯದ ವಿರುದ್ಧ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿದಾಳಿ ನಡೆಸಿ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್ ಗೆ ಇದೆ. ಹಮಾಸ್ ತಕ್ಷಣ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಸ್ಟಾಲ್ಟನ್ಬರ್ಗ್ ಹೇಳಿದ್ದಾರೆ.
Next Story