ದೀರ್ಘಾವಧಿಯ ಸಂಘರ್ಷಕ್ಕೆ ಸಿದ್ಧ: ಅಮೆರಿಕಕ್ಕೆ ಹೌದಿಗಳ ಎಚ್ಚರಿಕೆ
ಸಾಂದರ್ಭಿಕ ಚಿತ್ರ | Photo: NDTV
ಸನಾ : ಅಮೆರಿಕ ಹಾಗೂ ಬ್ರಿಟನ್ ಜತೆ ದೀರ್ಘಾವಧಿಯ ಸಂಘರ್ಷಕ್ಕೆ ಹೌದಿಗಳು ಸನ್ನದ್ಧರಾಗಿದ್ದಾರೆ ಎಂದು ಹೌದಿ ಪಡೆಗಳ ಕಮಾಂಡರ್ ಮುಹಮ್ಮದ್ ಅಲ್-ಅತೀಫಿ ಎಚ್ಚರಿಕೆ ನೀಡಿದ್ದಾರೆ.
ಜನವರಿ 28ರಂದು ಏಡನ್ ಕೊಲ್ಲಿಯಲ್ಲಿ ಅಮೆರಿಕದ ನೌಕಾಪಡೆಯ ಹಡಗು ಮತ್ತು ಬ್ರಿಟನ್ನ ಹಡಗನ್ನು ಗುರಿಯಾಗಿಸಿ ನಡೆಸಿರುವ ದಾಳಿಯನ್ನು ಸಮರ್ಥಿಸಿಕೊಂಡಿರುವ ಅವರು, ಗಾಝಾದಲ್ಲಿ ಇಸ್ರೇಲ್ನ ಯುದ್ಧ ನಿಲ್ಲುವ ತನಕ ಈ ರೀತಿಯ ದಾಳಿಗಳು ಮುಂದುವರಿಯಲಿವೆ. ದಬ್ಬಾಳಿಕೆಯ ಶಕ್ತಿಗಳೊಂದಿಗೆ ದೀರ್ಘಾವಧಿಯ ಸಂಘರ್ಷಕ್ಕೆ ನಾವು ಸಿದ್ಧವಿದ್ದೇವೆ. ಅಮೆರಿಕನ್ನರು, ಬ್ರಿಟಿಷರು ಹಾಗೂ ಅವರ ಜತೆ ಕೈಜೋಡಿಸಿದವರು ನಮ್ಮ ಶಕ್ತಿಯನ್ನು ಅರಿತುಕೊಂಡರೆ ಒಳಿತು' ಎಂದು ಹೇಳಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
Next Story