ಸಿರಿಯಾ ತೊರೆದ ಅಧ್ಯಕ್ಷ ಬಶರ್ ಅಸ್ಸಾದ್ : ರಷ್ಯಾ ಮಾಹಿತಿ
ಅಧಿಕಾರ ಹಸ್ತಾಂತರಿಸಿ ದೇಶ ತೊರೆದ ಸಿರಿಯಾ ಅಧ್ಯಕ್ಷ
PC : PTI
ಮಾಸ್ಕೋ: ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರು ಶಾಂತಿಯುತವಾಗಿ ಅಧಿಕಾರ ಹಸ್ತಾಂತರ ಮಾಡಿ ದೇಶವನ್ನು ತೊರೆದಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ರವಿವಾರ ತಿಳಿಸಿದೆ.
ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರು ಅಧಿಕಾರವನ್ನು ತೊರೆದು ದೇಶವನ್ನು ತೊರೆದಿದ್ದಾರೆ. ಅಸ್ಸಾದ್ ಈಗ ಎಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿಲ್ಲ. ಸಿರಿಯಾದಲ್ಲಿರುವ ರಷ್ಯಾದ ಸೇನಾ ನೆಲೆಗಳನ್ನು ಹೈ ಅಲರ್ಟ್ ನಲ್ಲಿ ಇರಿಸಲಾಗಿದೆ. ಆದರೆ ಪ್ರಸ್ತುತ ರಷ್ಯಾದ ಸೇನೆಗೆ ಯಾವುದೇ ಗಂಭೀರ ಬೆದರಿಕೆ ಇಲ್ಲ. ಮಾಸ್ಕೋ ಎಲ್ಲಾ ಸಿರಿಯಾದ ಎಲ್ಲಾ ಗುಂಪುಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಹಿಂಸಾಚಾರದಿಂದ ದೂರವಿರುವಂತೆ ಕೇಳಿಕೊಂಡಿದೆ ಎಂದು ಹೇಳಿದೆ.
ಸಿರಿಯಾದ ಬಶರ್ ಅಲ್-ಅಸ್ಸಾದ್ ಪಲಾಯನದಿಂದ ವಿರೋಧ ಪಕ್ಷಗಳು ಈಗ ರಾಜಧಾನಿ ಡಮಾಸ್ಕಸ್ ಅನ್ನು ನಿಯಂತ್ರಣಕ್ಕೆ ಪಡೆದುಕೊಂಡಿದೆ.
Next Story