ಗಾಝಾಕ್ಕೆ ನೆರವಿನ ಪ್ರಮಾಣ ಹೆಚ್ಚಿಸಲು ಆದ್ಯತೆ: ಬ್ಲಿಂಕೆನ್
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ಟರ್ಕಿ ವಿದೇಶಾಂಗ ಸಚಿವ ಹಕಾನ್ ಫಿದನ್ Photo: twitter/SecBlinken
ವಾಷಿಂಗ್ಟನ್: ಗಾಝಾದ ನಾಗರಿಕರಿಗೆ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ನೆರವು ಒದಗಿಸುವ ನಿಟ್ಟಿನಲ್ಲಿ ಅಮೆರಿಕ ಬಿರುಸಿನ ಪ್ರಯತ್ನ ನಡೆಸುತ್ತಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿದ್ದಾರೆ.
ಟರ್ಕಿಗೆ ಭೇಟಿ ನೀಡಿ ವಿದೇಶಾಂಗ ಸಚಿವ ಹಕಾನ್ ಫಿದನ್ ಜತೆ ಚರ್ಚೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಗಾಝಾಕ್ಕೆ ಹೆಚ್ಚಿನ ಪ್ರಮಾಣದ ನೆರವು ಒದಗಬೇಕೆಂಬುದು ನಮ್ಮ ಆಶಯವಾಗಿದೆ ಮತ್ತು ಇದನ್ನು ನಡೆಸಲು ಸಶಕ್ತ ಮಾರ್ಗಗಳು ನಮ್ಮಲ್ಲಿವೆ. ಮುಂದಿನ ದಿನಗಳಲ್ಲಿ ನೆರವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗುವ ಭರವಸೆ ನಮಗಿದೆ' ಎಂದರು.
Next Story