ಅಮೆರಿಕದಿಂದ ಎಫ್-16 ಜೆಟ್ ವಿಮಾನ ಖರೀದಿ | ಪ್ಯಾಕೇಜ್ನ ಪ್ರಮಾಣ ಕಡಿತಗೊಳಿಸಿದ ಟರ್ಕಿ
ಸಾಂದರ್ಭಿಕ ಚಿತ್ರ.| Photo: PTI
ಅಂಕಾರ : ಅಮೆರಿಕದಿಂದ ಎಫ್-16 ಜೆಟ್ವಿಮಾನ ಖರೀದಿಸುವ 23 ಶತಕೋಟಿ ಡಾಲರ್ ಮೊತ್ತದ ಒಪ್ಪಂದ ಪ್ಯಾಕೇಜ್ನ ಪ್ರಮಾಣವನ್ನು ಕಡಿಮೆಗೊಳಿಸಲು ನಿರ್ಧರಿಸಿರುವುದಾಗಿ ಟರ್ಕಿಯ ರಕ್ಷಣಾ ಸಚಿವರು ಹೇಳಿದ್ದಾರೆ.
ಅಮೆರಿಕದಿಂದ 40 ಎಫ್-16 ಯುದ್ಧವಿಮಾನ ಹಾಗೂ ಈಗ ತನ್ನ ಸೇನೆಯ ಬಳಿಯಿರುವ ಎಫ್-16 ಯುದ್ಧವಿಮಾನಗಳನ್ನು ಆಧುನೀಕರಿಸಲು 79 ಕಿಟ್ಗಳನ್ನು ಒಳಗೊಂಡ 23 ಶತಕೋಟಿ ಡಾಲರ್ ಮೊತ್ತದ ಖರೀದಿ ಒಪ್ಪಂದಕ್ಕೆ ಈ ವರ್ಷದ ಆರಂಭದಲ್ಲಿ ನೇಟೊ ಸದಸ್ಯ ಟರ್ಕಿ ಸಹಿ ಹಾಕಿತ್ತು. ಒಪ್ಪಂದದ ಅನುಸಾರ 1.4 ಶತಕೋಟಿ ಡಾಲರ್ ಮುಂಗಡ ಪಾವತಿಯನ್ನೂ ಮಾಡಲಾಗಿತ್ತು.
ಇದೀಗ 40 ಎಫ್-16 ಜೆಟ್ವಿಮಾನ ಮಾತ್ರ ಖರೀದಿಸಲು ನಿರ್ಧರಿಸಲಾಗಿದೆ. ಆಧುನೀಕರಣ ಕಾರ್ಯವನ್ನು ಟರ್ಕಿಷ್ ಏರೋಸ್ಪೇಸ್ ಇಂಡಸ್ಟ್ರೀಸ್ಗೆ ವಹಿಸಲಾಗುವುದು. 40 ಅತ್ಯಾಧುನಿಕ ಎಫ್-16 ಜೆಟ್ ವಿಮಾನಗಳ ಮೌಲ್ಯ ಸುಮಾರು 7 ಶತಕೋಟಿ ಡಾಲರ್ನಷ್ಟಾಗುತ್ತದೆ. ಇದರಲ್ಲಿ 1.4 ಶತಕೋಟಿ ಡಾಲರ್ ಹಣವನ್ನು ಈಗಾಗಲೇ ಪಾವತಿಸಲಾಗಿದೆ ಎಂದು ರಕ್ಷಣಾ ಸಚಿವರನ್ನು ಉಲ್ಲೇಖಿಸಿದ ವರದಿ ಹೇಳಿದೆ.