ಮುಂದಿನ ವಾರ ಪುಟಿನ್ ಕಿರ್ಗಿಸ್ತಾನಕ್ಕೆ ಭೇಟಿ
ವ್ಲಾದಿಮಿರ್ ಪುಟಿನ್ | Photo: NDTV
ಬಿಷ್ಕೇಕ್ : ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿನ ವಾರ ಕಿರ್ಗಿಸ್ತಾನಕ್ಕೆ ಭೇಟಿ ನೀಡಲಿದ್ದು, ಐಸಿಸಿ ವಾರಂಟ್ ಬಳಿಕ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ ಎಂದು ಕಿರ್ಗಿಸ್ತಾನದ `ಕಬರ್' ಸುದ್ಧಿಸಂಸ್ಥೆ ವರದಿ ಮಾಡಿದೆ.
ಉಕ್ರೇನ್ನಿಂದ ವಶಕ್ಕೆ ಪಡೆದ ಪ್ರಾಂತಗಳಲ್ಲಿರುವ ಮಕ್ಕಳನ್ನು ರಶ್ಯಕ್ಕೆ ಕಾನೂನುಬಾಹಿರವಾಗಿ ಸ್ಥಳಾಂತರಗೊಳಿಸಿದ ಆರೋಪದಲ್ಲಿ ಪುಟಿನ್ ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಮಾರ್ಚ್ನಲ್ಲಿ ಬಂಧನ ವಾರಂಟ್ ಜಾರಿಗೊಳಿಸಿದಂದಿನಿಂದ ಪುಟಿನ್ ದೇಶದಿಂದ ಹೊರಗೆ ಹೋಗಿಲ್ಲ.
`ಕಿರ್ಗಿಸ್ತಾನದ ಅಧ್ಯಕ್ಷರ ಆಹ್ವಾನದ ಮೇರೆಗೆ ರಶ್ಯ ಅಧ್ಯಕ್ಷರು ಅ. 12ರಂದು ಕಿರ್ಗಿಸ್ತಾನಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಈ ಸಂದರ್ಭ ಅವರು ಕಾಂಟ್ ನಗರದಲ್ಲಿರುವ ರಶ್ಯದ ಸೇನಾನೆಲೆಯ 20ನೇ ಸ್ಥಾಪನಾ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿ ಹೇಳಿದೆ.
Next Story