ಗಾಝಾದಲ್ಲಿ ನೆರವು ಸಂಸ್ಥೆಗಳಿಗೆ ಇಂಟರ್ನೆಟ್ ಸಂಪರ್ಕ ಒದಗಿಸಲು ಸಿದ್ಧ: ಎಲಾನ್ ಮಸ್ಕ್
ಗಾಝಾ, ಅ.28: ಗಾಝಾದಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ನೆರವು ಒದಗಿಸುವ ಸಂಸ್ಥೆಗಳಿಗೆ ಸ್ಟಾರ್ಲಿಂಕ್ ಇಂಟರ್ನೆಟ್ ಸಂಪರ್ಕ ಒದಗಿಸಲು ಸಿದ್ಧ ಎಂದು ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಶನಿವಾರ ಘೋಷಿಸಿದ್ದಾರೆ.
ಗಾಝಾ ಪಟ್ಟಿಯ ಮೇಲೆ ಶುಕ್ರವಾರ ಇಸ್ರೇಲ್ ನಡೆಸಿದ ಭೀಕರ ಬಾಂಬ್ದಾಳಿಯ ಬಳಿಕ ಆ ಪ್ರದೇಶದಲ್ಲಿ ಟೆಲಿಫೋನ್ ಮತ್ತು ಇಂಟರ್ನೆಟ್ ಕಡಿತಗೊಂಡಿದೆ.
‘ಇಂತಹ ಕೃತ್ಯವನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಸುಮಾರು 2.2 ದಶಲಕ್ಷ ಜನರಿಗೆ ಎಲ್ಲಾ ಸಂವಹನವನ್ನು ಕಡಿತಗೊಳಿಸಿರುವುದು ಸ್ವೀಕಾರಾರ್ಹವಲ್ಲ. ಪತ್ರಕರ್ತರು, ವೈದ್ಯಕೀಯ ಪ್ರತಿನಿಧಿಗಳು, ಮಾನವೀಯ ಕಾರ್ಯಗಳು ಹಾಗೂ ಅಮಾಯಕ ಜನತೆ ಅಪಾಯದಲ್ಲಿದ್ದಾರೆ’ ಎಂದು ಅಮೆರಿಕದ ಪ್ರತಿನಿಧಿ ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆರ್ ಹೇಳಿದ್ದಾರೆ.
Next Story