ಅಮೆರಿಕ | 5 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಅಕ್ರಮ ವಲಸೆ ಕಾರಣ : ರಿಪಬ್ಲಿಕನ್ ಪಕ್ಷದ ದೂಷಣೆ
Photo: ISTOCK
ನ್ಯೂಯಾರ್ಕ್: ಕಳೆದ ತಿಂಗಳೂ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿರುವ ಲಾಂಗ್ ಐಲ್ಯಾಂಡ್ ನಿವಾಸಿ ಅಕ್ರಮವಾಗಿ ದೇಶದಲ್ಲಿ ನೆಲೆಸಿದ್ದ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಿಗೇ, ಅಧ್ಯಕ್ಷೀಯ ಚುನಾವಣಾ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಈ ಪ್ರಕರಣಕ್ಕೆ ಅಕ್ರಮ ವಲಸೆ ಕಾರಣ ಎಂದು ರಿಪಬ್ಲಿಕನ್ ಪಕ್ಷ ದೂಷಿಸಿದೆ.
ಹೊಂಡುರನ್ ಅಕ್ರಮ ವಲಸಿಗನಾದ 27 ವರ್ಷದ ವಿಲ್ಸನ್ ಕ್ಯಾಸ್ಟಿಲೊ ಡಿಯಾಝ್, ಗಡಿ ಗಸ್ತು ಸಿಬ್ಬಂದಿಗಳಿಗೆ ಸಿಕ್ಕಿ ಬೀಳುವುದಕ್ಕೂ ಮುನ್ನ, 2014ರಲ್ಲಿ ರಿಯೊ ಗ್ರಾಂಡೆ ವ್ಯಾಲಿ ಮೂಲಕ ಅಮೆರಿಕಕ್ಕೆ ನುಸುಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮ ವಲಸೆ ವಿಚಾರಣೆಯನ್ನು ತಪ್ಪಿಸಿಕೊಂಡಿದ್ದ ಕ್ಯಾಸ್ಟಿಲೊ ಡಿಯಾಝ್, ಕೊನೆಯದಾಗಿ ನ್ಯೂಯಾರ್ಕ್ ನ ವೆಸ್ಟ್ ಬರಿಯಲ್ಲಿ ವಾಸಿಸುತ್ತಿದ್ದ ಎಂದು ಪ್ರಾಧಿಕಾರಗಳು ತಿಳಿಸಿವೆ.
ಅಕ್ಟೋಬರ್ 22ರಂದೇ ಪೊಲೀಸರು ಕ್ಯಾಸ್ಟಿಲೊ ಡಿಯಾಝ್ ನನ್ನು ಬಂಧಿಸಿದರೂ, ಈ ವಿಷಯವನ್ನು ಶುಕ್ರವಾರದವರೆಗೆ ಬಹಿರಂಗಪಡಿಸಿರಲಿಲ್ಲ. ಅಕ್ರಮ ವಲಸೆಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡಿದ್ದ ಚುನಾವಣಾ ಪ್ರಚಾರದ ಅಂತ್ಯಗೊಳ್ಳಿಲು ಇನ್ನು ಕೆಲವೇ ದಿನಗಳಿದ್ದಾಗ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿತ್ತು.
ತಮ್ಮ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಭಾವನೆಯನ್ನು ಬಡಿದೆಬ್ಬಿಸುವ ಪ್ರಯತ್ನ ಮಾಡಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರಿ ಪ್ರಮಾಣದ ಅಕ್ರಮ ವಲಸೆಯಿಂದ ನ್ಯೂಯಾರ್ಕ್ ನಗರದಲ್ಲಿ ಅಪರಾಧ ಸಂಖ್ಯೆಗಳ ಪ್ರಮಾಣ ಹೆಚ್ಚುತ್ತಿದೆ ಎಂದು ಆರೋಪಿಸಿದ್ದರು. ಆದರೆ, ದತ್ತಾಂಶಗಳು ಮಾತ್ರ ಡೊನಾಲ್ಡ್ ಟ್ರಂಪ್ ಅವರ ಆರೋಪವನ್ನು ಸಮರ್ಥಿಸುವಂತಿಲ್ಲ ಎಂದು ವರದಿಯಾಗಿದೆ.
2022ರಿಂದ ಈ ಬೇಸಿಗೆಯ ವೇಳೆಗೆ ನ್ಯೂಯಾರ್ಕ್ ನಗರಕ್ಕೆ 2,10,000ಕ್ಕೂ ಹೆಚ್ಚು ಅಕ್ರಮ ವಲಸಿಗರು ನುಸುಳಿದ್ದು, ಈ ಅಕ್ರಮ ವಲಸೆಯನ್ನು ಒಪ್ಪಿಕೊಳ್ಳುವ ಮೂಲಕ ಸಾಮಾಜಿಕ ಸೇವೆ ಹಾಗೂ ನಗರದ ವರ್ಚಸ್ಸಿನ ಮೇಲೆ ಋಣಾತ್ಮಕ ಪರಿಣಾಮವುಂಟಾಗಿದೆ ಎನ್ನಲಾಗಿದೆ.
ಅತ್ಯಾಚಾರ ಆರೋಪಿ ಕ್ಯಾಸ್ಟಿಲೊ ಡಿಯಾಝ್ ನನ್ನು 2,00,000 ಡಾಲರ್ ಬಾಂಡ್ ಮೇಲೆ ನಸ್ಸಾವು ಕೌಂಟಿ ಜೈಲಿನಲ್ಲಿರಿಸಲಾಗಿದೆ. ಈ ಮಾಹಿತಿಯನ್ನಯ ವಲಸೆ ಮತ್ತು ಸುಂಕ ಜಾರಿ ಅಧಿಕಾರಿಗಳ ಗಮನಕ್ಕೆ ಪೊಲೀಸರು ತಂದಿದ್ದಾರೆ.