ಬಾಂಗ್ಲಾದಲ್ಲಿ ಪತ್ರಕರ್ತರ ವಿರುದ್ಧದ ಆರೋಪಕ್ಕೆ ಆರ್ಎಸ್ಎಫ್ ಖಂಡನೆ
ಸಾಂದರ್ಭಿಕ ಚಿತ್ರ
ಪ್ಯಾರಿಸ್ : ಬಾಂಗ್ಲಾದೇಶದಲ್ಲಿ ಹಲವು ಪತ್ರಕರ್ತರ ವಿರುದ್ಧ ಅತಿರೇಕದ ಆರೋಪ ದಾಖಲಿಸಿರುವುದನ್ನು `ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್' (ಆರ್ಎಸ್ಎಫ್) ಖಂಡಿಸಿದ್ದು ಬಂಧಿತ ಪತ್ರಕರ್ತರನ್ನು ತಕ್ಷಣ ಬಿಡುಗಡೆಗೊಳಿಸಿ, ಅವರ ವಿರುದ್ಧ ದಾಖಲಿಸಿರುವ ಆಧಾರವಿಲ್ಲದ ಆರೋಪಗಳನ್ನು ಕೈಬಿಡುವಂತೆ ಆಗ್ರಹಿಸಿದೆ.
ಆಗಸ್ಟ್ 5ರಂದು ಶೇಖ್ ಹಸೀನಾ ಸರಕಾರ ಪತನಗೊಂಡಂದಿನಿಂದ ಪತ್ರಕರ್ತರ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಆಗಸ್ಟ್ 29ರಂದು ನ್ಯಾಯವಾದಿಯೊಬ್ಬರು 27 ಪ್ರಮುಖ ಪತ್ರಕರ್ತರ ವಿರುದ್ಧ ಮಾನವೀಯತೆಯ ವಿರುದ್ಧ ಅಪರಾಧ ಮತ್ತು ನರಮೇಧ ಆರೋಪವನ್ನು ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯಲ್ಲಿ ದಾಖಲಿಸಿದ್ದಾರೆ.
` ಪತ್ರಕರ್ತರ ಮೇಲಿನ ಈ ವ್ಯವಸ್ಥಿತ ನ್ಯಾಯಾಂಗ ಕಿರುಕುಳ ಕೊನೆಗೊಳ್ಳಬೇಕು. ಪತ್ರಕರ್ತರ ವಿರುದ್ಧ ದಾಖಲಿಸಿರುವ ಆಧಾರ ರಹಿತ ಆರೋಪಗಳನ್ನು ಕೈಬಿಡಬೇಕು' ಎಂದು ಆರ್ಎಸ್ಎಫ್ ಆಗ್ರಹಿಸಿದೆ.
Next Story