ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ: ಪುಟಿನ್ ಘೋಷಣೆ
ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ಮುಂದಿನ ಮಾರ್ಚ್ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಘೋಷಿಸಿದ್ದಾರೆ.
2012ರಿಂದ ರಶ್ಯದ ಅಧ್ಯಕ್ಷರಾಗಿರುವ ಪುಟಿನ್ ಗೆದ್ದರೆ ಮತ್ತೆ 6 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಪುಟಿನ್ 1999ರಿಂದ 2000ದವರೆಗೆ ಮತ್ತು 2008ರಿಂದ 2012ರವರೆಗೆ ರಶ್ಯದ ಪ್ರಧಾನಿಯಾಗಿ, 2000ದಿಂದ 2008ರವರೆಗೆ ಮತ್ತು 2012ರಿಂದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
Next Story