ಗೂಢಚಾರಿಕೆ ಆರೋಪ: ರಶ್ಯದಿಂದ ಇಬ್ಬರು ಬ್ರಿಟಿಷ್ ರಾಜತಾಂತ್ರಿಕರ ಉಚ್ಛಾಟನೆ

Photo Credit | AP
ಮಾಸ್ಕೋ: ಗೂಢಚಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬ್ರಿಟನ್ನ ಇಬ್ಬರು ರಾಜತಾಂತ್ರಿಕರಿಗೆ ದೇಶದಿಂದ ನಿರ್ಗಮಿಸಲು ಎರಡು ವಾರಗಳ ಸಮಯ ನೀಡಲಾಗಿದೆ ಎಂದು ರಶ್ಯ ಸೋಮವಾರ ಹೇಳಿದೆ.
ಅಮೆರಿಕ-ರಶ್ಯ ಸಂಬಂಧ ಸುಧಾರಣೆಗೆ ಪ್ರಯತ್ನ ಮುಂದುವರಿದಿರುವ ನಡುವೆಯೇ ಯುರೋಪ್ ಜೊತೆಗಿನ ರಶ್ಯದ ಸಂಬಂಧದಲ್ಲಿ ಬಿರುಕು ಹೆಚ್ಚುತ್ತಿದೆ.
ರಶ್ಯದಲ್ಲಿರುವ ಬ್ರಿಟನ್ ರಾಯಭಾರಿ ಕಚೇರಿಯ ದ್ವಿತೀಯ ಕಾರ್ಯದರ್ಶಿ ಮತ್ತು ಪ್ರಥಮ ಕಾರ್ಯದರ್ಶಿಯ ಪತಿಯನ್ನು ಗೂಢಚಾರಿಕೆ ಕಾರ್ಯದ ಆರೋಪದಲ್ಲಿ ಉಚ್ಛಾಟಿಸಲಾಗಿದೆ.
ಇವರಿಬ್ಬರು ರಶ್ಯ ದೇಶವನ್ನು ಪ್ರವೇಶಿಸಲು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಒದಗಿಸುವ ಮೂಲಕ ರಶ್ಯದ ಕಾನೂನನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರ ಮಾನ್ಯತೆಯನ್ನು ಹಿಂಪಡೆಯಲಾಗಿದ್ದು ಎರಡು ವಾರಗಳೊಳಗೆ ರಶ್ಯದಿಂದ ನಿರ್ಗಮಿಸಲು ಸೂಚಿಸಲಾಗಿದೆ. ಜತೆಗೆ ರಾಯಭಾರಿ ಕಚೇರಿಯ ಪ್ರತಿನಿಧಿಗೆ ರಶ್ಯದ ವಿದೇಶಾಂಗ ಇಲಾಖೆ ಸಮನ್ಸ್ ನೀಡಿದೆ ಎಂದು ತಾಸ್ ಸುದ್ದಿಸಂಸ್ಥೆಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
Next Story