`ವಾಂಟೆಡ್' ಪಟ್ಟಿಗೆ ಐಸಿಸಿ ಅಧ್ಯಕ್ಷರನ್ನು ಸೇರಿಸಿದ ರಶ್ಯ
Photo:X/judge_piotr
ಮಾಸ್ಕೊ: ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ)ಯ ಅಧ್ಯಕ್ಷ ಪಿಯೊಟರ್ ಹೊಫ್ಮಾನ್ಸ್ಕಿಯನ್ನು `ವಾಂಟೆಡ್' ಪಟ್ಟಿಯಲ್ಲಿ ಸೇರಿಸಿರುವುದಾಗಿ ರಶ್ಯ ಘೋಷಿಸಿದೆ.
`ರಶ್ಯ ಗಣರಾಜ್ಯದ ಕ್ರಿಮಿನಲ್ ನೀತಿ ಸಂಹಿತೆಯಡಿ ಪೋಲ್ಯಾಂಡ್ನ ಪಿಯೊಟರ್ ಹೊಫ್ಮಾನ್ಸ್ಕಿಯನ್ನು `ವಾಂಟೆಡ್' ಪಟ್ಟಿಯಲ್ಲಿ ಸೇರಿಸಲಾಗಿದೆ' ಎಂದು ರಶ್ಯದ ಆಂತರಿಕ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
Next Story