ನವಾಲಿ ನ ಪತ್ನಿಯನ್ನು `ಭಯೋತ್ಪಾದಕರ ಪಟ್ಟಿಗೆ' ಸೇರಿಸಿದ ರಶ್ಯ
PC : NDTV
ಮಾಸ್ಕೋ : ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ರಾಜಕೀಯ ಎದುರಾಳಿಯಾಗಿದ್ದ ಅಲೆಕ್ಸಿ ನವಾಲ್ನಿಯ ಪತ್ನಿ ಯೂಲಿಯಾ ನವಾಲ್ನಾಯರನ್ನು ರಶ್ಯ ಗುರುವಾರ `ಭಯೋತ್ಪಾದಕರ ಪಟ್ಟಿ'ಗೆ ಸೇರಿಸಿದೆ.
ವಿರೋಧ ಪಕ್ಷದ ಪ್ರಮುಖ ಮುಖಂಡರಾಗಿದ್ದ ನವಾಲ್ನಿ ಫೆಬ್ರವರಿಯಲ್ಲಿ ರಶ್ಯದ ಆಕ್ರ್ಟಿಕ್ ಜೈಲಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಬಳಿಕ ನವಾಲ್ನಿಯ ಹೋರಾಟವನ್ನು ಮುಂದುವರಿಸುವುದಾಗಿ ಯೂಲಿಯಾ ಘೋಷಿಸಿದ್ದರು ಹಾಗೂ ವಿದೇಶಕ್ಕೆ ಸ್ಥಳಾಂತರಗೊಂಡಿದ್ದರು.
ಯೂಲಿಯಾ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿರುವ ರಶ್ಯ, ಅವರನ್ನು `ಭಯೋತ್ಪಾದಕರು ಮತ್ತು ತೀವ್ರವಾದಿಗಳ' ಪಟ್ಟಿಗೆ ಸೇರಿಸಿದೆ ಎಂದು ವರದಿಯಾಗಿದೆ.
Next Story