ಚಂದ್ರನಲ್ಲಿ ಪರಮಾಣು ರಿಯಾಕ್ಟರ್ ಸ್ಥಾಪನೆಗೆ ರಶ್ಯ, ಚೀನಾ ಯೋಜನೆ
ಯೂರಿ ಬೊರಿಸೋವ್ | Photo: news18.com
ಮಾಸ್ಕೋ : ಚಂದಿರನ ಮೇಲೆ ಪರಮಾಣು ರಿಯಾಕ್ಟರ್ ಒಂದನ್ನು ಸ್ಥಾಪಿಸುವ ಯೋಜನೆಯನ್ನು ರಶ್ಯ ಮತ್ತು ಚೀನಾ ಪರಿಶೀಲಿಸುತ್ತಿದೆ ಎಂದು ರಶ್ಯದ ಬಾಹ್ಯಾಕಾಶ ಸಂಸ್ಥೆಯ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ `ತಾಸ್' ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಮ್ಮ ಚೀನೀ ಪಾಲುದಾರರೊಂದಿಗೆ ಜಂಟಿಯಾಗಿ ನಡೆಸುವ ಈ ಯೋಜನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. 2033ರಿಂದ 2035ರ ನಡುವಿನ ಅವಧಿಯಲ್ಲಿ ಈ ರಿಯಾಕ್ಟರ್ ಸ್ಥಾಪಿಸುವ ಉದ್ದೇಶವಿದೆ. ಇಂತಹ ಕಾರ್ಯಾಚರಣೆ ಸ್ವಯಂ ಚಾಲಿತವಾಗಿರಬೇಕು ಮತ್ತು ಅದಕ್ಕೆ ಅಗತ್ಯವಾದ ತಾಂತ್ರಿಕ ವ್ಯವಸ್ಥೆ ಬಹುತೇಕ ಸಿದ್ಧವಾಗಿದೆ ಎಂದು ರಶ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೊಸ್ಕೊಸ್ಮೋಸ್ನ ಸಿಇಒ ಯೂರಿ ಬೊರಿಸೋವ್ ಹೇಳಿದ್ದಾರೆ.
Next Story